ಬಹುಕಾಲದ ಗೆಳೆಯ ರೋಷನ್ ಜೊತೆ ಸಪ್ತಪದಿ ತುಳಿದ ಕುಡ್ಲದ ಕುವರಿ, ನಿರೂಪಕಿ ಅನುಶ್ರೀ

ಬೆಂಗಳೂರು: ಮಂಗಳೂರಿನ ಕುವರಿ ನಟಿ, ನಿರೂಪಕಿ ಅನುಶ್ರೀಯ ಮದುವೆ ಕೊಡಗು ಮೂಲದ ರಾಮಮೂರ್ತಿ ಮತ್ತು ಸಿಸಿಲಿಯಾ ದಂಪತಿ ಪುತ್ರ ಬಹು ಕಾಲದ ಗೆಳೆಯ ಹಾಗೂ ಉದ್ಯಮಿಯಾಗಿರುವ ರೋಷನ್ ಜೊತೆಗೆ ಇಂದು ನಡೆದಿದೆ. ಬೆಂಗಳೂರಿನ ಕಗ್ಗಲಿಪುರದಲ್ಲಿರುವ ಸಂಭ್ರಮ ಬೈ ಸ್ವಾನ್ ಲೈನ್ಸ್ ಸ್ಟುಡಿಯೋಸ್ ರೆಸಾರ್ಟ್ ನ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10:56ರ ಶುಭ ಮೂಹೂರ್ತದಲ್ಲಿ ರೋಷನ್ ಜೊತೆಗೆ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇತ್ತ ಮದುವೆಗೂ ಹಿಂದಿನ ದಿನ ನಡೆದ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಹಳದಿ ಶಾಸ್ತ್ರದ ವೇಳೆ ಅನುಶ್ರೀ ರೋಷನ್ ಸು ಫ್ರಂ ಸೋ ಚಿತ್ರದ `ಬಂದರೋ ಬಂದರೋ ಬಾವ ಬಂದರೋ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.ಇನ್ನೂ ಅನುಶ್ರೀ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿಬಿಟ್ಟಿದೆ. ಪವರ್ ಸ್ವಾರ್ ಅಪ್ಪು ಅಭಿಮಾನಿಯಾಗಿರುವ ಅನುಶ್ರೀ ಅವರು ತಾವು ಮದುವೆಯಾಗುತ್ತಿರುವ ಮಂಟಪದಲ್ಲಿ ಅಪ್ಪು ಫೋಟೋವನ್ನು ರಾರಾಜಿಸುವಂತೆ ಮಾಡಿದ್ದಾರೆ.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಖ್ಯಾತ ನಟ, ನಟಿಯರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಮಧ್ಯೆ ತಮ್ಮ ನೆಚ್ಚಿನ ನಿರೂಪಕಿಯ ಮದುವೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗಿದೆ ಅಂತ ಹೇಳಲಾಗುತ್ತಿದೆ.

ಅನುಶ್ರೀ ಹೆಸರು ಮಾಡುವುದಕ್ಕೆ ಅಭಿಮಾನಿಗಳು ಕಾರಣ. ಮದುವೆಗೆ ಆಹ್ವಾನವಿಲ್ಲದೆ ಯಾರಿಗೂ ಪ್ರವೇಶವಿಲ್ಲ.

ಮದುವೆ ನೋಡಲು ಬಂದ ನಮ್ಮನ್ನು ಒಳಗಡೆ ಬಿಟ್ಟಿಲ್ಲ ಎಂದು ಫ್ಯಾನ್ಸ್ ಬೇಸರ ಹೊರ ಹಾಕಿದ್ದಾರೆ.

News Editor

Learn More →

Leave a Reply

Your email address will not be published. Required fields are marked *