



ಬೋಂದೆಲ್ ಸರ್ಕಲ್ ಬಳಿ 13 ವರ್ಷಗಳಿಂದ ಹೂ ವ್ಯಾಪಾರ ಮಾಡುತ್ತಿದ್ದ ಶಾಲಿನಿ ಬೋಂದೆಲ್ (38) ಎಂಬ ಹೆಂಗಸನ್ನು ಆಟೋ ಚಾಲಕರೆಲ್ಲ ಸೇರಿ ಆ ಜಾಗದಿಂದ ಓಡಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ.
ಈ ಕಾರಣಕ್ಕಾಗಿ ಶಾಲಿನಿ ಬೋಂದೆಲ್ ಆತ್ಮ ಹತ್ಯೆಗೆ ಯತ್ನಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಮೊದಲು ಆಟೋ ನಿಲ್ದಾಣ ಬೇರೆ ಕಡೆ ಇತ್ತು. ಈಗ ಹೂ ಮಾರೋ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮಾಡಿದ್ದು,
ಇವರ ಕ್ಯೂ ಆಟೋ ನಿಲ್ದಾಣ ಬಿಟ್ಟು ಹೂ ಮಾರೋ ಅಂಗಡಿ ಮುಂದೆ ಪಾರ್ಕ್ ಮಾಡಿ ಹೂ ಮಾರಿ ಜೀವನ ಸಾಗಿಸುತ್ತಿರುವ ಮಹಿಳೆಗೆ ತೊಂದರೆ ಕೊಡುತ್ತಿದ್ದಾರೆ.

ರಿಕ್ಷಾ ಸ್ಟ್ಯಾಂಡಿಗೆ ಇನ್ನೂ ಅನುಮತಿ ಸಿಕ್ಕಿಲ್ಲ ಆದರೂ ಕೂಡ ಏಕಾಏಕಿ ನಿನ್ನೆ ಹೋಗಿ
ಕಂದಾಯ ಅಧಿಕಾರಿ ಎಂದು ಹೇಳಿಕೊಂಡು ಸಾಮಾನ್ಯ ಬಿಲ್ ಕಲೆಕ್ಟರ್ ಗಳು ಹೊಸುಲಿಗೆ ಇಳಿದಿದ್ದರೆ ಅಲ್ಲದೆ ಮಹಿಳೆಗೆ ಧಮ್ಕಿ ಹಾಕಿದ್ದಾರೆ.
ಹೀಗೆ ದುಡಿದು ಜೀವನ ನಡೆಸುವ ಬಡ ಹೆಂಗಸಿಗೆ ತೊಂದರೆ ಕೊಡುವ ಬದಲು ಕಾನೂನು ಬದ್ದವಾಗಿ ರಿಕ್ಷಾ ಸ್ಟಾಂಡ್ ವ್ಯವಸ್ಥೆ ಮಾಡಿಕೊಡಲು ಹೋರಾಟ ಮಾಡಬಹುದಲ್ವಾ..?


