ರಾತ್ರಿ 10 ಗಂಟೆ ಒಳಗಾಗಿ ಧ್ವನಿವರ್ಧಕ ಬಳಕೆ ಸ್ಥಗಿತಗೊಳಿಸುವುದು ಹಾಗೂ ಡಿಜೆ ಕಡ್ಡಾಯವಾಗಿ ನಿಷೇಧ

ಪುತ್ತೂರು: ರಾತ್ರಿ 10 ಗಂಟೆ ಒಳಗಾಗಿ ಧ್ವನಿವರ್ಧಕ ಬಳಕೆ ಸ್ಥಗಿತಗೊಳಿಸುವುದು ಹಾಗೂ ಡಿಜೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು ಇದನ್ನು ಸಂಘಟಕರು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ನಗರ ಠಾಣಾ ಇನ್ಸ್‍ಪೆಕ್ಟರ್ ಜಾನ್ಸನ್ ಡಿಸೋಜ ಹೇಳಿದರು.

ಪುತ್ತೂರು ನಗರ ಠಾಣೆಯಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮ ಸಂಘಟಕರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಹಬ್ಬದಲ್ಲಿ ಮಹಿಳೆಯರು, ಮಕ್ಕಳು ಪಾಲ್ಗೊಳ್ಳುತ್ತಾರೆ. ಹಾಗಾಗಿ ಎಷ್ಟು ಬೇಗ ಪೂರ್ಣಗೊಳಿಸುತ್ತಿರೋ ಅಷ್ಟು ಬೇಗ ಮನೆಗೆ ಮರಳಲು ಸಾಧ್ಯವಾಗುತ್ತದೆ. ಜನರು ಬೇಗ ಬಂದು ಕ್ಲಪ್ತ ಸಮಯದಲ್ಲಿ ಕಾರ್ಯಕ್ರಮ ನಡೆಸಲು ಸಹಕಾರ ನೀಡುವಂತೆ ಸಂಘಟಕರು ಮನವಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಕೆಲ ಸಾಂಸ್ಕøತಿಕ ಕಾರ್ಯಕ್ರಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಪದ ಬಳಕೆ, ಅಭಿನಯದ ಬಗ್ಗೆ ಈಗಾಗಲೇ ದೂರುಗಳು ಬಂದಿದೆ. ಹಾಗಾಗಿ ಗಣೇಶೋತ್ಸವದ ಸಾಂಸ್ಕøತಿಕ ವೇದಿಕೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಸಂಘಟಕರೇ ಎಚ್ಚರಿಕೆ ವಹಿಸಬೇಕು ಎಂದು ಜಾನ್ಸನ್ ಸಲಹೆ ನೀಡಿದರು.

ಗಣೇಶೋತ್ಸವಕ್ಕೆ ಸಂಬಂದಿಸಿ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯಲು ನೇರವಾಗಿ ಪೆÇಲೀಸ್ ಠಾಣೆಗೆ ಬರುವಂತಿಲ್ಲ. ನಗರದಲ್ಲಿ ನಗರಸಭೆ, ಗ್ರಾಮಾಂತರದಲ್ಲಿ ಗ್ರಾ.ಪಂ.ನಿಂದ ಅನುಮತಿ ಪತ್ರ ಪಡೆದು ಅನಂತರ ಠಾಣೆಗೆ ಬರಬೇಕು. ಸುರಕ್ಷತೆಯ ಖಾತರಿಗೋಸ್ಕರ ಅಗ್ನಿಶಾಮಕ, ಮೆಸ್ಕಾಂ ಅವರಿಂದಲೂ ಪರಿಶೀಲನೆ ನಡೆಸುವುದು ಉತ್ತಮ ಎಂದರು.

ಎಸ್‍ಐ ಆಂಜನೇಯ ರೆಡ್ಡಿ ಮಾತನಾಡಿ, ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ರಾತ್ರಿ 10 ಗಂಟೆಯ ಒಳಗೆ ಧ್ವನಿವರ್ಧಕ ಬಂದ್ ಮಾಡಬೇಕು. ಅದು ಆಯಾ ಕಾರ್ಯಕ್ರಮದ ಸಂಘಟಕರ ಜವಾಬ್ದಾರಿ ಮೆರವಣಿಗೆ ಸಾಗುವ ಅಥವಾ ಕಾರ್ಯಕ್ರಮ ನಡೆಯುವ ಆಸುಪಾಸಿನ ಜನರಿಗೆ ತೊಂದರೆ ಆಗುತ್ತದೆ ಅನ್ನುವ ಭಾವನೆ ನಮ್ಮಲ್ಲಿ ಇರಬೇಕು. ಇನ್ನೂ ರಸ್ತೆಯಲ್ಲಿ ಮೆರವಣಿಗೆ ಆದಷ್ಟು ಬೇಗ ಸಾಗಬೇಕು. ಆ್ಯಂಬುಲೆನ್ಸ್ ಸಹಿತ ಅಗತ್ಯ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗದಂತೆ ಗಮನ ಹರಿಸಬೇಕು ಎಂದರು.

ಸಂಚಾರಿ ಠಾಣೆಯ ಉಪನೀರಿಕ್ಷಕ ಉದಯರವಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಹಿರಿಯ ಮುಂದಾಳು ಯು.ಪೂವಪ್ಪ ಸಹಿತ ನಗರ ಮತ್ತು ಗ್ರಾಮಾಂತರ ಭಾಗದ ವಿವಿಧ ಗಣೇಶೋತ್ಸವ ಸಮಿತಿಯ ಪದಾ„ಕಾರಿಗಳು ಪಾಲ್ಗೊಂಡು ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದರು.

News Editor

Learn More →

Leave a Reply

Your email address will not be published. Required fields are marked *