ಬಿಜೆಪಿ ವಿರುದ್ಧ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಆಕ್ರೋಶ

ಪುತ್ತೂರು: ಜನಾರ್ದನ ಪೂಜಾರಿ ಅವರದ್ದು ನಾರಾಯಣ ಗುರುಗಳ ಸಿದ್ಧಾಂತವಾಗಬೇಕಿತ್ತು, ಸಾವರ್ಕರ್ ಸಿದ್ಧಾಂತವಲ್ಲ ಎಂದು ಪ್ರಶ್ನೆ ಮಾಡಿದ ವಿಚಾರವನ್ನು ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದಾರೆಂದು ಬಿಂಬಿಸುವ ಕಾರ್ಯ ಮಾಡಲಾಗುತ್ತಿದೆ. ಧರ್ಮಸ್ಥಳದಲ್ಲಿ ಬುರುಡೆ ಅಗೆಯುವಾಗ ಬಿಜೆಪಿಯವರ ಬುರುಡೆಗೆ ಪೆಟ್ಟಾಗಿದೆ. ಬುರುಡೆ ಬಿಡುವುದೇ ಬಿಜೆಪಿಯ ಕೆಲಸವಾಗಿದ್ದು, ರಾಜಕೀಯ ವಿರೋಧಿಗಳ ಸುಪಾರಿಯ ಹಿನ್ನಲೆಯಲ್ಲಿ ಬಿಜೆಪಿ ಮಾತನಾಡಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಹೇಳಿದರು.

ನಾರಾಯಣ ಗುರುಗಳ ಸಿದ್ಧಾಂತವಾ ಎಂದು ಕೇಳಿದ ತಕ್ಷಣ ಅವರಿಗೆ ಅವಮಾನ ಹೇಗಾಗುತ್ತದೆ. ಸುಳ್ಳುಗಳೇ ಬಿಜೆಪಿಯವರ ಬಂಡವಾಳವಾಗಿದೆ. ವಿಚಾರವನ್ನು ತಿರುಚಿ ಹೇಳಿಕೊಂಡು ರಾಜಕಾರಣ ಮಾಡುವುದು ಜಾಯಮಾನವಾಗಿದೆ. ಜವಾಬ್ದಾರಿಯುತ ಶಾಸಕರು ತಿರುಚಿ ಆರೋಪ ಮಾಡುವ ಮೂಲಕ ಸಮುದಾಯವನ್ನು ಎತ್ತಿಕಟ್ಟುವುದಕ್ಕೆ ಮುಂದಾಗಿದ್ದಾರೆ. ಬಿಜೆಪಿಯವರು ನಾರಾಯಣ ಗುರುಗಳು ಸಿದ್ಧಾಂತವನ್ನು, ಆದರ್ಶವನ್ನು ನೀವು ಒಪ್ಪುತ್ತೀರಾ? ಇತಿಹಾಸವನ್ನು ಕೆದಕಿದರೆ, ಇದೇ ಬಿಜೆಪಿ ನಾಯಕರು ಮತ್ತು ಪಕ್ಷ ನಾರಾಯಣ ಗುರುಗಳಿಗೆ ಅವಮಾನ ಮಾಡಿದೆ. ನಾರಾಯಣ ಗುರುಗಳ ಹೆಸರನ್ನು ಪಠ್ಯಪುಸ್ತಕದಿಂದು ತೆಗೆಸಿದ್ದು, ಟ್ಯಾಬ್ಲೋ ವನ್ನು ಗಣರಾಜ್ಯೋತ್ಸವದಲ್ಲಿ ತಿರಸ್ಕಾರ ಮಾಡಿರುವುದು ಬಿಜೆಪಿಯವರು ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ನಾರಾಯಣ ಗುರುಗಳ ವಿಚಾರವನ್ನು ಬೇಕಾದರೆ ಬಿಜೆಪಿಗರಿಗೆ ಪಾಠ ಮಾಡುವೆ, ಹೇಳಿಕೆಗಳನ್ನು ತಿರುಚುವುದು ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಿರಿಯರಾದ ಮೌರೀಸ್ ಮಸ್ಕರೇನಸ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಸ್, ಉಪಾಧ್ಯಕ್ಷ ಸುರೇಶ್ ಪೂಜಾರಿ ಮೊಟ್ಟೆತ್ತಡ್ಕ, ಎನ್.ಎಸ್. ವೈ. ರಾಜ್ಯ ಪ್ರಧಾನ ಕಾರ್ಯದರ್ಶಿ ಬಾತಿಶಾ ಅಳಕೆಮಜಲು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *