ಬೋಳಿಯಾರ್ ಜಾರದಗುಡ್ಡೆ ಸರಕಾರಿ ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸಿ ಡಿವೈಎಫ್ಐ ಯಿಂದ ಬೋಳಿಯಾರ್ ಗ್ರಾಮ ಪಂಚಾಯತ್ ಗೆ ಮನವಿ.

ಬೋಳಿಯಾರ್ ಜಾರದಗುಡ್ಡೆ ಸರಕಾರಿ ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸಿ ಡಿವೈಎಫ್ಐ ಯಿಂದ ಬೋಳಿಯಾರ್ ಗ್ರಾಮ ಪಂಚಾಯತ್ ಗೆ ಮನವಿ

ಬೋಳಿಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾರದಗುಡ್ಡೆ ಪ್ರದೇಶದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆ (ಕರಿಸಾಲೆ) ಯ ಆವರಣ ಗೋಡೆಯು ಬಿರುಕು ಬಿಟ್ಟಿದ್ದು ಬೀಳುವ ಸ್ಥಿತಿಯಲ್ಲಿದೆ.ಪಕ್ಕದಲ್ಲೇ ಕಾರ್ಯಾಚರಿಸುತ್ತಿರುವ ಅಂಗನವಾಡಿಯಲ್ಲಿರುವ ಪುಟ್ಟ ಪುಟ್ಟ ಮಕ್ಕಳು ಆವರಣ ಗೋಡೆ ಕುಸಿಯುವ ಭೀತಿಯಲ್ಲಿಯೇ ತರಗತಿಯಲ್ಲಿ ಕೂತು ಪಾಠ ಕೇಳಬೇಕಾಗಿದೆ.ಅಂಗನವಾಡಿ ಕಟ್ಟಡದ ಗೋಡೆಯೂ ಕೂಡ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿಯಲ್ಲಿದೆ.ಜನಪ್ರತಿನಿಧಿಗಳಿಗೆ ವಿವರವಾಗಿ ತಿಳಿಸಿದರೂ ಚಕಾರ ಎತ್ತುತ್ತಿಲ್ಲ.ಜಿಲ್ಲೆಯಲ್ಲಿ ಈಗಾಗಲೇ ಗೋಡೆ ಬಿದ್ದಿರುವ ಹಲವಾರು ಘಟನೆ ನಡೆದು ಹೋಗಿ ಜೀವಹಾನಿ ಸಂಭವಿಸುರುತ್ತದೆ.ಸ್ಥಳೀಯ ಶಾಸಕರಾದ ಯು.ಟಿ ಕಾದರ್ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಬರುವ ಶಾಲೆ ಇದಾಗಿದೆ ಶಾಲೆಯ ಸಮೀಪದಲ್ಲಿಯೇ ಶಾಸಕರ ಶಾಶ್ವತ ವಿಳಾಸದ ಮನೆಯೂ ಕೂಡ ಇದೆ.ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಕಾರ್ಯಾಚರಿಸುತ್ತಿರುವ ಈ ಶಾಲೆಯ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಮಳೆಗಾಲದಲ್ಲಿ ಮಳೆನೀರು ಸೋರುತ್ತಿರುತ್ತವೆ.ಇದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಕಾರಣಕ್ಕಾಗಿ ಶಾಲೆಯ ಒಂದು ಕಟ್ಟಡದ ವಿದ್ಯುತ್ ನಿಲ್ಲಿಸಲಾಗಿದೆ.ಇಷ್ಟೆಲ್ಲಾ ಅವ್ಯವ್ಯಸ್ಥೆಯಿಂದ ಕೂಡಿದ ಈ ಶಾಲೆಯನ್ನು ಸರಿಪಡಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದೆ ಬಾರದ ಕಾರಣ ಶಾಲೆಯು ಬಂದಾಗುವ ಭೀತಿ ಎದುರಾಗಿದೆ.ಹಾಗಾಗಿ ಸರಕಾರಿ ಶಾಲೆಯನ್ನು ಉಳಿಸುವ ದೃಷ್ಟಿಯಿಂದ ಶಾಲೆಯಲ್ಲಿರುವ ಈ ಎಲ್ಲಾ ಅವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸಿದೆ .ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ ಉಪಾಧ್ಯಕ್ಷರಾದ ರಝಾಕ್ ಮುಡಿಪು,ಮುಖಂಡರಾದ ಇರ್ಫಾನ್ ಇರಾ,ಸಾಮಾಜಿಕ ಕಾರ್ಯಕರ್ತರಾದ ಶಮೀರ್,ಸ್ಥಳೀಯರಾದ ಫಯಾಜ್,ರಫೀಕ್,ಸಲಾಮ್ ಜಾರದಗುಡ್ಡೆ,ಬಾಪು ಅಮ್ಮೆಂಬಳ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *