ಅಂಜಲಿ ಹತ್ಯೆ ಪ್ರಕರಣ : ದೂರು ಬಂದಿದ್ದರೂ ನಿರ್ಲಕ್ಷ್ಯ, ಪೊಲೀಸ್ ಇನ್ಸ್‌ಪೆಕ್ಟರ್‌, ಮುಖ್ಯ ಪೇದೆ ಅಮಾನತು!

ಹುಬ್ಬಳ್ಳಿ, ವೀರಾಪುರ ಓಣಿಯ ಅಂಜಲಿ ಯುವತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸ್ ಇನ್ಸ್‌ಪೆಕ್ಟರ್‌ ಚಂದ್ರಶೇಖರ ಚಿಕ್ಕೋಡಿ ಹಾಗೂ ಠಾಣೆಯ ಮುಖ್ಯಪೇದೆ ರೇಖಾ ಅವರನ್ನು ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್‌ ಅವರು ಆದೇಶ ಹೊರಡಿಸಿದ್ದಾರೆ.

ಅಂಜಲಿಗೆ ಜೀವ ಬೆದರಿಕೆ ಇದೆ ಎಂದು ಅಂಜಲಿ ಅಂಬಿಗೇರ ಅಜ್ಜಿ ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷಿಸಿದ್ದ ಆರೋಪ ಕೇಳಿಬಂದಿತ್ತು.

ಆರೋಪಿ ವಿಶ್ವ ಒಂದು ವಾರದ ಹಿಂದೆಯೇ ಅಂಜಲಿಗೆ ಜೀವ ಬೆದರಿಕೆ ಹಾಕಿದ್ದು, ನನ್ನ ಜೊತೆಗೆ ಬಾರದಿದ್ದರೆ ನೇಹಾ ತರ ಕೊಲೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಕೂಡಲೇ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ನಿರ್ಲಕ್ಷ್ಯ ತೋರಿಸಿದ್ದರು. ಆ ಹಿನ್ನೆಲೆ ಇದೀಗ ಅವರುನ್ನು ಅಮಾನತ್ತು ಮಾಡಲಾಗಿದೆ.

News Editor

Learn More →

Leave a Reply

Your email address will not be published. Required fields are marked *