ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ,ದಕ್ಷಿಣ ಕನ್ನಡ ದ್ವಿತೀಯ : ರಾಜ್ಯದಲ್ಲಿ ಏಕೈಕ ವಿದ್ಯಾರ್ಥಿನಿಗೆ 625/625 – ಕೇವಲ 8 ವಿದ್ಯಾರ್ಥಿಗಳಿಗೆ 624.

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ,ದಕ್ಷಿಣ ಕನ್ನಡ ದ್ವಿತೀಯ : ರಾಜ್ಯದಲ್ಲಿ ಏಕೈಕ ವಿದ್ಯಾರ್ಥಿನಿಗೆ 625/625 – ಕೇವಲ 8 ವಿದ್ಯಾರ್ಥಿಗಳಿಗೆ 624.

ಪ್ರಸಕ್ತ ಸಾಲಿನ ಎಸ್‌ಎಸ್ ಎಲ್‌ಸಿ ಪರೀಕ್ಷೆ-1ರ ಫಲಿತಾಂಶ (SSLC RESULT) ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ https://karresults.nic.in ปู่ ಫಲಿತಾಂಶ ವೀಕ್ಷಿಸಬಹುದು.ಈ ಬಾರಿಯ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ 94% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಏಕೈಕ ವಿದ್ಯಾರ್ಥಿನಿ ಬಾಗಲಕೋಟೆಯ ಅಂಕಿತಾ 625/625 ಅಂಕ ಪಡೆದಿರುವುದು ಈ ಬಾರಿಯ ವಿಶೇಷವಾಗಿದೆ. 8 ವಿದ್ಯಾರ್ಥಿಗಳು ಮಾತ್ರ 624 ಅಂಕ ಪಡೆದಿದ್ದಾರೆ.

ಈ ಬಾರಿಯ ಎಸ್‌ಎಸ್ಎಲ್ ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 73.40 ರಷ್ಟು ಫಲಿತಾಂಶ ದಾಖಲಾಗಿದೆ.

ಈ ಬಾರಿಯ ಪರೀಕ್ಷೆಯನ್ನು ಸಿಸಿಟಿವಿ ಕಣ್ಣಾವಲಿನಲ್ಲಿ ನಡೆಸಲಾಗಿದ್ದು, ಹೀಗಾಗಿ ಶೇಕಡಾ 30ರಷ್ಟು ಫಲಿತಾಂಶ ಕಡಿಮೆಯಾಗಿದೆ. ಹೀಗಾಗಿ ಕೃಪಾಂಕದ ಪ್ರಮಾಣವನ್ನು 10ರಿಂದ 20%ಗೆ ಹೆಚ್ಚಿಸಲಾಗಿದೆ.

ಮಾ.25ರಿಂದ ಏ.6ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿತ್ತು. ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *