ಡ್ರಗ್ಸ್ ಸಾಗಾಟದ ದೋಣಿಯನ್ನು ವಶಕ್ಕೆ ಪಡೆದ ಭಾರತ; 600 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ : 14 ಪಾಕಿಸ್ತಾನೀಯರ ಬಂಧನ.

ಗುಜರಾತ್ ಕರಾವಳಿ ಆಚೆಗಿನ ಸಾಗರ ಗಡಿಭಾಗದಲ್ಲಿ ಸಾಗಿ ಬರುತ್ತಿದ್ದ ಪಾಕಿಸ್ತಾನದ ದೋಣಿಯೊಂದನ್ನು ಭಾರತದ ಕರಾವಳಿ ಕಾವಲು ಪಡೆ ವಶಕ್ಕೆ ತೆಗೆದುಕೊಂಡಿದೆ.

ದೋಣಿಯಲ್ಲಿ 600 ಕೋಟಿ ರೂ ಮೌಲ್ಯದ, 86 ಕಿಲೋ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಐಸಿಜಿ ಭಾನುವಾರ ನೀಡಿದೆ. ಗುಪ್ತಚರ ಮಾಹಿತಿಯೊಂದರ ಮೇರೆಗೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಮತ್ತು ಕರಾವಳಿ ಕಾವಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಿಂದ ಭಾರತಕ್ಕೆ ನಾರ್ಕೋಟಿಕ್ಸ್ ಸಾಗಿಸುತ್ತಿದ್ದ ದೋಣಿಯನ್ನು ತಡೆದು ನಿಲ್ಲಿಸಿವೆ. ದೋಣಿಯಲ್ಲಿದ್ದ 14 ಮಂದಿ ಪಾಕ್ ನಾಗರಿಕರು ಮತ್ತು ಡ್ರಗ್ಸ್ ಅನ್ನು ಭಾರತದ ಅಧಿಕಾರಿಗಳು ವಶಪಡಿಸಿಕೊಂಡಿವೆ.

ಗುಜರಾತ್​ನ ಪೋರಬಂದರ್​ನ ಪಶ್ಚಿಮಕ್ಕೆ ಅರೇಬಿಯನ್ ಸಾಗರಲ್ಲಿ ಪಾಕಿಸ್ತಾನೀ ದೋಣಿಯನ್ನು ಹಿಡಿಯಲಾಯಿತು. ಇದರಲ್ಲಿ 14 ಮಂದಿ ಪಾಕಿಸ್ತಾನೀಯರು, 600 ಕೋಟಿ ರೂ ಮೌಲ್ಯದ 86 ಕಿಲೋ ನಾರ್ಕೋಟಿಕ್ಸ್ ಅನ್ನು ಜಫ್ತಿ ಮಾಡಲಾಯಿತು,’ ಎಂದು ಇಂಡಿಯನ್ ಕೋಸ್ಟಲ್ ಗಾರ್ಡ್ ತನ್ನ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಪೋಸ್ಟ್ ಮಾಡಿದೆ.

ಸಮುದ್ರದ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಣೆ ಆಗುತ್ತಿದೆ ಎಂದು ಗುಪ್ತಚರರಿಂದ ಮಾಹಿತಿ ಬಂದಿದ್ದು ಅದರ ಮೇರೆಗೆ ವಿವಿಧ ಇಲಾಖೆಗಳು ಸಮನ್ವಯತೆಯೊಂದಿಗೆ ಕಾರ್ಯಾಚರಣೆ ನಡೆಸಿದ್ದವು. ಪಾಕಿಸ್ತಾನದ ದೋಣಿ ತಪ್ಪಿಸಿಕೊಂಡು ಹೋಗಲು ಯತ್ನಿಸಿತಾದರೂ ಐಸಿಜಿ ಈ ದೋಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?