
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಎ.14ರಂದು ಮಂಗಳೂರಿನಲ್ಲಿ ಆಯೋಜಿಸಿದ್ದ ಸಮಾವೇಶ ದಿಡೀರ್ ರದ್ದಾಗಿದೆ. ಕೇವಲ ರೋಡ್ ಶೋ ಮಾತ್ರ ಆಯೋಜಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಆಯೋಜಿಸಲಾಗಿದ್ದ ಸಮಾವೇಶಕ್ಕೆ ಸಂಪೂರ್ಣ ತಯಾರಿ ನಡೆಸಲಾಗಿತ್ತು.
ಕೊನೆಯ ಕ್ಷಣದಲ್ಲಿ ಸಮಾವೇಶ ರದ್ದಾಗಿದೆ ಎಂಬ ಮಾಹಿತಿ ಜಿಲ್ಲಾ ಬಿಜೆಪಿಗೆ ಲಭ್ಯವಾಗಿದೆ. ಮಂಗಳೂರಿನ ವಿಮಾನನಿಲ್ದಾಣದಿಂದ ಸಿಟಿಯಲ್ಲಿ ರೋಡ್ ಶೋ ನಡೆಯಲಿದೆ ಎನ್ನಲಾಗಿದೆ.



