ಕಾವೇರಿಕಟ್ಟೆಯಲ್ಲಿ ಗಣೇಶೋತ್ಸವ ಸಂಭ್ರಮ

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾವೇರಿಕಟ್ಟೆ ಇದರ 27ನೇ ವರ್ಷದ ಗಣೇಶೋತ್ಸವ ಪುತ್ತೂರಿನ ದರ್ಬೆಯ ಕಾವೇರಿಕಟ್ಟೆ ಕಾರ್ಟೇಕ್ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇಂದು ಬೆಳಿಗ್ಗೆ ಅರ್ಚಕರಾದ ಉದಯ್ ಭಟ್ ಸಂಪ್ಯ ಇವರ ನೇತೃತ್ವದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. ಬಳಿಕ ಗಣಪತಿ ಹವನ, ಮಹಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ದಿನೇಶ್ ಪಿ., ಅಧ್ಯಕ್ಷ ಗೋವರ್ಧನ ಶೆಟ್ಟಿ, ಉಪಾಧ್ಯಕ್ಷ ನಳೀನಾಕ್ಷ, ಕಾರ್ಯದರ್ಶಿ ದಿನೇಶ್ ಕುಮಾರ್ ಮರೀಲ್, ಕೋಶಾದಿಕಾರಿ ಕೆ.ಪಿ. ಸುಧಾಕರ್, ಜೊತೆ ಕೋಶಾಧಿಕಾರಿ ರವೀಂದ್ರ ಹೆಗ್ಡೆ ಮರೀಲ್, ಗೌರವ ಸಲಹೆಗಾರರಾದ ಡಾ.ಗೋಪಿನಾಥ್ ಪೈ, ಬಿ.ವೆಂಕಟೇಶ್ ಭಟ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *