
ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಇಬ್ಬರು ಯುವಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಜೆ ಬಲ್ಮಠ ಬಳಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಕೇರಳ ಎರ್ನಾಕುಲಂನ ಎಲ್ವಿನ್ ಶಿಜು (19)ನನ್ನು ಕದ್ರಿ ಪೊಲೀಸರು ಹಾಗೂ ಬೆಳಿಗ್ಗೆ ಸೆಂಟ್ರಲ್ ಮಾರ್ಕೆಟ್ ಬಳಿ ಎರ್ನಾಕುಲಂನ ಆಡ್ಸನ್ ಜಾರ್ಜ್ (19)ನನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.


