ಉಡುಪಿ ಜಿಲ್ಲಾ ಗಣಿ ಸಮಸ್ಯೆ ಬಗೆಹರಿಸಲು ಗಣಿ ಸಚಿವರಿಂದ ಗ್ರೀನ್ ಸಿಗ್ನಲ್ ಉಡುಪಿ ಜಿಲ್ಲಾ 5 ಶಾಸಕರ ಪ್ರಯತ್ನಕ್ಕೆ ಫಲ.

ಉಡುಪಿ ಜಿಲ್ಲಾ ಗಣಿ ಸಮಸ್ಯೆ ಬಗೆಹರಿಸಲು ಗಣಿ ಸಚಿವರಿಂದ ಗ್ರೀನ್ ಸಿಗ್ನಲ್ ಉಡುಪಿ ಜಿಲ್ಲಾ 5 ಶಾಸಕರ ಪ್ರಯತ್ನಕ್ಕೆ ಫಲ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಉಡುಪಿ ಜಿಲ್ಲೆಯ ಶಾಸಕ ಮಿತ್ರರು, ಹಿರಿಯರೂ ಆದ ಕುಂದಾಪುರ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಅವರೊಂದಿಗೆ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಲಾಯಿತು.

ಭೇಟಿಯ ವೇಳೆ ಕಳೆದ ಹಲವು ತಿಂಗಳುಗಳಿಂದ ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು, ಶಿಲೆ ಕಲ್ಲು ಹಾಗೂ ಮರಳು ಸಿಗದೇ ಕ್ವಾರಿ ಮಾಲೀಕರು, ಲಾರಿ ಮಾಲೀಕರು, ರೈತರು ಹಾಗೂ ಕೂಲಿ ಕಾರ್ಮಿಕರ ಸಹಿತ ವಿವಿಧ ಕಟ್ಟಡ ಕಾಮಗಾರಿಗಳಿಗೆ ಸಾಮಾಗ್ರಿಗಳು ದೊರೆಯದೇ ಇಡೀ ಜಿಲ್ಲೆಯು ತೊಂದರೆಗೊಳಗಾದ ಬಗ್ಗೆ ಮತ್ತು ಜಿಲ್ಲಾಡಳಿತವು ಏಕಾಏಕಿ ಕೆಂಪು ಕಲ್ಲು ತೆಗೆಯುವ ಸಂಬಂಧ 3AB ನಡಿ ನೀಡಿರುವ ಅನುಮತಿಗಳನ್ನು ರದ್ದು ಪಡಿಸಿರುವ ಬಗ್ಗೆ ಮಾನ್ಯ ಸಚಿವರ ಗಮನಕ್ಕೆ ತಂದು ಸದರಿ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದು ಹಾಗೂ ಕರಾವಳಿಯ ಉಳಿದ ಜಿಲ್ಲೆಗಳಲ್ಲಿ ಇರುವಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಹಿಂದೆ ನೀಡುತ್ತಿದ್ದಂತೆ 3A ನಡಿ ಕೆಂಪು ಕಲ್ಲು ತೆಗೆಯಲು ಈ ಕೂಡಲೇ ಅನುಮತಿ ನೀಡುವಂತೆ ಆಗ್ರಹಿಸಲಾಯಿತು.

ನಮ್ಮ ಆಗ್ರಹಪೂರ್ವಕ ಮನವಿಗೆ ಸ್ಪಂದಿಸಿದ ಮಾನ್ಯ ಸಚಿವರು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆದು, ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ಸಮಸ್ಯೆ ಇತ್ಯರ್ಥ ಪಡಿಸುವಂತೆ ಸೂಚನೆ ನೀಡಿದರು.

News Editor

Learn More →

Leave a Reply

Your email address will not be published. Required fields are marked *