ಬೈಲೂರು ಬಳಿ ಕಾರು ಸ್ಕೂಟಿ ಡಿಕ್ಕಿ: ಗಾಯ

ಬೈಲೂರು ಬಳಿ ಕಾರು ಸ್ಕೂಟಿ ಡಿಕ್ಕಿ: ಗಾಯ

ಕಾರ್ಕಳ: ಕಾರ್ಕಳ ತಾಲೂಕಿನ ಬೈಲೂರು ಚಂದನ ವೈನ್ಸ್ ಬಳಿ ಕಾರು ಮತ್ತು ಸ್ಕೂಟಿಯ ನಡುವೆ ಅಪಘಾತ ನ. 10ರಂದು ಸಂಭವಿಸಿದೆ.

KA-20-MB-2744 ನಂಬ್ರದ ಕಾರನ್ನು ಚಾಲಕ ಪುತ್ತು ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಬೈಲೂರು ಚಂದನ ವೈನ್ಸ್ ಬಳಿ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಬಂದು ಸುರೇಶ ಇವರು ಚಲಾಯಿಸಿಕೊಂಡು ಬರುತ್ತಿದ್ದ KA-20-HD-2726 ನೇ ನಂಬ್ರದ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಸ್ಕೂಟಿ ಸವಾರ ಸುರೇಶ ಇವರ ಬಲಕಾಲಿಗೆ ಮುಖಕ್ಕೆ ಹಾಗೂ ಕೈಗಳಿಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

News Editor

Learn More →

Leave a Reply

Your email address will not be published. Required fields are marked *