ಪುತ್ತೂರಿಗೆ ಆಗಮಿಸಿದ ಪ್ರಖ್ಯಾತ ಗಾಯಕಿ ಕುಮಾರಿ ಸೂರ್ಯ ಗಾಯತ್ರಿ

ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನೀಡಲು ಪುತ್ತೂರಿಗೆ ಆಗಮಿಸಿದ ಪ್ರಖ್ಯಾತ ಗಾಯಕಿ ಕುಮಾರಿ ಸೂರ್ಯ ಗಾಯತ್ರಿಯವರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ನಡೆಯಲ್ಲಿ ತಮ್ಮ ಕಂಠ ಶ್ರೀಯಿಂದ ಸ್ತುತಿಸಿದರು. ಅವರಿಗೆ ಶ್ರೀ ದೇವಳದ ವತಿಯಿಂದ ಪ್ರಧಾನ ಅರ್ಚಕ ವಸಂತ ಕುಮಾರ ಕೆದಿಲಾಯರು ವಿಶೇಷ ಪ್ರಾರ್ಥನೆ ಮಾಡಿ ಶ್ರೀ ದೇವರ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ ಮುಳಿಯರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಅರ್ಚಕರಾದ ಜಯರಾಮ ಜೋಯಿಸ, ಉದಯ ಕೃಷ್ಣ ಭಟ್, ಅಂಬಿಕಾ ವಿದ್ಯಾಸಂಸ್ಥೆ ಯ ಸುಬ್ರಹ್ಮಣ್ಯ ನಟ್ಟೋಜ, ಗಣೇಶ್ ಪ್ರಸಾದ್, ವೈಷ್ಣವೀ ಜೆ.ರಾವ್, ಸೂರ್ಯಗಾಯತ್ರಿಯವರ ತಂದೆ ಪಿ.ವಿ.ಅನಿಲ್ ಕುಮಾರ್, ತಾಯಿ ಪಿ.ಕೆ.ದಿವ್ಯ ಮೊದಲಾದವರು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *