ಗೋರಖ್‌ಪುರದಲ್ಲಿ ಸಿಎಂ ಯೋಗಿ ಜೊತೆ ʼಮುಚ್ಚಿದ ಬಾಗಿಲಿನʼಸಭೆ ನಡೆಸಿದ RSS ಮುಖ್ಯಸ್ಥ ಮೋಹನ್ ಭಾಗವತ್

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ  ಆರ್‌ಎಸ್‌ಎಸ್ ಮತ್ತು ಬಿಜೆಪಿನಡುವೆ ತಿಕ್ಕಾಟ ಮುಂದುವರಿದಿರುವಂತೆ, ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಶನಿವಾರ  ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು  ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದರು ಹಾಗೂ ಗಂಟೆಗಳ ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ

ಆದಿತ್ಯನಾಥ್ ಶನಿವಾರ ಎರಡು ಬಾರಿ ಭಾಗವತ್ ಅವರನ್ನು ಭೇಟಿಯಾದರು ಎಂದು ಗೋರಖ್‌ಪುರದ ಮೂಲಗಳು ಖಚಿತಪಡಿಸಿವೆ ಎಂದು ಅಂಗ್ಲ ದೈನಿಕ ಇಂಡಿಯಾನ್‌ ಎಕ್ಸ್‌ ಪ್ರೆಸ್‌ ವರದಿ ಮಾಡಿದೆ.   ಶನಿವಾರ  ಮಧ್ಯಾಹ್ನ ಕ್ಯಾಂಪೀರ್‌ಗಂಜ್ ಪ್ರದೇಶದ ಶಾಲೆಯಲ್ಲಿ ಭಾಗವತ್ ಅವರು ಸಭೆ ಮತ್ತು ಆರ್‌ಎಸ್‌ಎಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ಸಿಎಂ ಯೋಗಿ  ಆರೆಸ್ಸೆಸ್ ಮುಖ್ಯಸ್ಥರನ್ನು ಮೊದಲ ಬಾರಿ  ಭೇಟಿ ಮಾಡಿದರು

ಬಳಿಕ  ರಾತ್ರಿ 8:30 ರ ಸುಮಾರಿಗೆ ನಗರದ ಪಕ್ಕಿಬಾಗ್ ಪ್ರದೇಶದಲ್ಲಿರುವ ಸರಸ್ವತಿ ಶಿಶು ಮಂದಿರಕ್ಕೆ ಭೇಟಿ ನೀಡಿದ ಯೋಗಿ ಅದಿತ್ಯನಾಥ್‌ ಅಲ್ಲಿ ಕೂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕರನ್ನು ಭೇಟಿಯಾದರು  ಎಂದು ಮೂಲಗಳು ತಿಳಿಸಿವೆ. ಎರಡೂ “ಮುಚ್ಚಿದ-ಬಾಗಿಲು” ಸಭೆಗಳು ಸುಮಾರು 30 ನಿಮಿಷಗಳ ಕಾಲ ನಡೆದವು ಎಂದು ಅವರು ಹೇಳಿದರು

 ಮೂರು ದಶಕಗಳಿಂದ ಆರ್‌ಎಸ್‌ಎಸ್‌ನೊಂದಿಗೆ ನಿಕಟ  ಸಂಬಂಧ ಹೊಂದಿರುವ ಗೋರಖ್‌ಪುರದ ಹಿರಿಯ ಬಿಜೆಪಿ ನಾಯಕರೊಬ್ಬರ ಪ್ರಕಾರ  ಭಾಗವತ್ ಅವರ ಗೋರಖ್‌ಪುರ ಪ್ರವಾಸವು ವಾಡಿಕೆಯ ಭೇಟಿಯಲ್ಲ.   ಉತ್ತರ ಪ್ರದೇಶ ದಲ್ಲಿನ ಬಿಜೆಪಿ  ಸೋಲಿನ ಹಿಂದಿನ ಪ್ರಮುಖ ಕಾರಣಗಳ ಅಧ್ಯಯನ ನಡೆಸುವ ಉದ್ದೇಶದಿಂದಲೇ ಈ ಪ್ರವಾಸ ನಡೆಸಲಾಗಿದೆ ಎಂದು ಇಂಡಿಯನ್‌ ಎಕ್ಸ್‌ ಪ್ರೆಸ್‌ ಆರ್‌ ಎಸ್‌ ಎಸ್‌ ಮೂಗಳನ್ನು ಉದ್ದೇಶಿಸಿ ತಿಳಿಸಿದೆ.  ಇದೆ ಹಿನ್ನಲೆಯಲ್ಲಿ ಭಾಗವತ್‌ ಅವರು   ಆದಿತ್ಯನಾಥ್ ಅವರೊಂದಿಗೆ ಚರ್ಚೆ  ನಡೆಸಿದ್ದಾರೆ  ಎಂದು ಹೇಳಿದ್ದಾರೆ.

ಭಾಗವತ್ ಅವರು ಬುಧವಾರ ಗೋರಖ್‌ಪುರ ತಲುಪಿದ ನಂತರ, ಆ ಪ್ರದೇಶದ ಆರ್‌ಎಸ್‌ಎಸ್ ಪದಾಧಿಕಾರಿಗಳೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದರು ಮತ್ತು ಚುನಾವಣೆಯ ಕುರಿತು ಅವರಿಂದ ವರದಿಗಳನ್ನು ಪಡೆದರು ಎಂದು ಮೂಲಗಳು ತಿಳಿಸಿವೆ.‌

ಆಶ್ಚರ್ಯಕರ ಸಂಗತಿಯೆಂದರೆ, ಯುಪಿಯಲ್ಲಿ  80 ಲೋಕಸಭಾ ಸ್ಥಾನಗಳ ಪೈಕಿ 2014 ರಲ್ಲಿ 71 ಮತ್ತು 2019 ರಲ್ಲಿ 62   ಗೆದ್ದಿದ್ದ ಬಿಜೆಪಿ 2024ರ ಚುನಾವಣೆಯಲ್ಲಿ ಕೇವಲ  33 ಸ್ಥಾನವನ್ನಷ್ಟೇ   ಗೆಲ್ಲಲು ಸಾಧ್ಯವಾಯಿತು. ರಾಜ್ಯದಲ್ಲಿ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟವು 43 ಸ್ಥಾನಗಳನ್ನು ಗೆದ್ದಿತ್ತು ಹಾಗೂ ಬಿಜೆಪಿ ಮೈತ್ರಿಕೂಟ ಕೇವಲ  37 ಸ್ಥಾನಗಳನ್ನು ಗಳಿಸಿತು.  

ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 293 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಕೇವಲ 240 ಸ್ಥಾನಗಳನ್ನು ಗಳಿಸಲು ಶಕ್ತವಾಯಿತು   ಕಾಂಗ್ರೆಸ್ 99 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?