ಪುತ್ತೂರು : ಜಿಲ್ಲಾ ಕಾಂಗ್ರೇಸ್ ಸೋಷಿಯಲ್ ಮೀಡಿಯಾ ಮುಖಂಡ , ಪುತ್ತೂರಿನ ಉದ್ಯಮಿ ಪ್ರಕಾಶ್ ಪುರುಷರಕಟ್ಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಪುತ್ತೂರಿನಲ್ಲಿ KSRTC ಬಸ್ ನಿಲ್ದಾಣದಲ್ಲಿ ಇಫಾ ಮೊಬೈಲ್ ಅಂಗಡಿ ಹೊಂದಿರುವ ಪ್ರಕಾಶ್ ಅವರು ನರಿಮೊಗರು ವಲಯ ಕಾಂಗ್ರೇಸ್ನ ಅಧ್ಯಕ್ಷರಾಗಿದ್ದರು.
ಅತ್ಯುತ್ತಮ ಕ್ರಿಕೆಟ್ ಆಟಗಾರನಾಗಿದ್ದ ಪ್ರಕಾಶ್ ಅವರು ಪುರುಷರಕಟ್ಟೆಯಲ್ಲಿ ಟೈಬ್ರೆಕರ್ ಎಂಬ ಕ್ರಿಕೆಟ್ ತಂಡವನ್ನು ಕಟ್ಟಿ ಬೆಳೆಸಿದವರು. ಒಬ್ಬ ಅತ್ಯುತ್ತಮ ಕ್ರೀಡಾ ಸಂಘಟಕರಾಗಿದ್ದ ಅವರು , ಬಿಡ್ಡಿಂಗ್ ಮಾದರಿಯಲ್ಲಿ ಐಪಿಎಲ್ ಮಾದರಿಯ ಪಂದ್ಯಾಕೂಟವನ್ನು ಪುತ್ತೂರಿನಲ್ಲಿ ಪರಿಚಯಿಸಿದವರು.
ಆರಂಭದಲ್ಲಿ ಇಫಾ ಹೆಸರಿನಲ್ಲಿ ವಿಟ್ಲದಲ್ಲಿ ಮೊಬೈಲ್ ಉದ್ದಿಮೆಯನ್ನು ಆರಂಭಿಸಿದ ಅವರು , ಬಳಿಕ ಪುತ್ತೂರಿನ ಹಲವೆಡೆ ಅದರ ಶಾಖೆಗಳನ್ನು ಆರಂಭಿಸಿದ್ದರು. ಚೈನಾ ಮೊಬೈಲ್ ಫೋನ್ ಗಳ ವಿತರಕರಾಗಿಯೂ ಕೆಲ ವರ್ಷ ವ್ಯವಹಾರ ನಡೆಸಿದ್ದರು. ತುರ್ತು ಸಮಯದಲ್ಲಿ ರಕ್ತ ನೀಡಲು ಜನರು ಹಿಂದೇಟು ಹಾಕುತ್ತಿದ್ದ ಸಂದರ್ಬ ನಿರಂತರವಾಗಿ ರಕ್ತದಾನ ಮಾಡುತ್ತಿದ್ದ ಅಲ್ಲದೇ ತನ್ನ ಫೇಸ್ ಬುಕ್ ಖಾತೆಯಲ್ಲಿ ತನ್ನ ಹೆಸರಿನ ಮುಂದೆ ತನ್ನ ರಕ್ತದ ಗುಂಪು ( o +ve) ಹಾಕುವ ಮೂಲಕ ಜಾಗೃತಿ ಮೂಡಿಸಿದ್ದರು.
ಮೃತರು ಪತ್ನಿ ,ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತದೇಹ ಮಹಾವೀರ ಆಸ್ಪತ್ರೆಯಲ್ಲಿದ್ದು, ಅಂತಿಮ ನಮನ ಸಲ್ಲಿಸಲು ಕಾಂಗ್ರೇಸ್ನ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.

News Editor

Learn More →

Leave a Reply

Your email address will not be published. Required fields are marked *