ಸುಳ್ಯ: ಎಲ್ಲಾ ಆರೋಪಿಗಳಿಗೂ ಮರಣ ದಂಡನೆಯಾಗಬೇಕು’- ಪ್ರವೀಣ್ ನೆಟ್ಟಾರು ಪತ್ನಿ.


 

ಸುಳ್ಯ, : ನನ್ನ ಪತಿಯ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಮರಣ ದಂಡನೆಯಾಗಬೇಕು. ಮುಂದೆ ಸಮಾಜದಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದು ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಹೇಳಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಮುಸ್ತಫಾ ಪೈಚಾರ್ ಬಂಧಿಸಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಪತಿಯ ಹತ್ಯೆ ಪ್ರಕರಣ ಮುಸ್ತಫಾ ಪೈಚಾರ್​ನೇ ಪ್ರಮುಖ ಆರೋಪಿ. ಅವನನ್ನು ಬಂಧಿಸಿದ್ದಕ್ಕೆ ನಮಗೆ ತುಂಬಾ ಖುಷಿಯಾಗಿದೆ. ಇಡೀ ದೇಶದಲ್ಲಿ ಇಂತಹ ಪ್ರಕರಣಗಳು ಮತ್ತೆ ನಡೆಯಬಾರದು. ನಮ್ಮ ಕುಟುಂಬದ ಪರವಾಗಿ ಎನ್​ಐಎ ಅಧಿಕಾರಿಗಳಿಗೆ ಧನ್ಯವಾದ ಹೇಳುತ್ತೇನೆ. ಬಂಧನ ಆಗಿರುವುದು ನಮಗೆಲ್ಲ ತುಂಬಾ ಖುಷಿಯಾಗಿದೆ ಎಂದರು.

ಪ್ರಕರಣ ನಡೆದು ಎರಡು ವರ್ಷವಾದರೂ ಆರೋಪಿಗಳನ್ನ ಬಂಧಿಸಲು ಎನ್​ಐಎ ಅಧಿಕಾರಿಗಳು ತುಂಬಾ ಪ್ರಯತ್ನ ಪಡುತ್ತಿದ್ದಾರೆ. ಎನ್​​ಐಎ ಸಂಸ್ಥೆಯ ಮೇಲೆ ನಂಬಿಕೆ ಇದೆ. ಎಲ್ಲ ಆರೋಪಿಗಳ ಬಂಧನವಾಗುತ್ತೆ. ಈ ಪ್ರಕರಣದ ಆರೋಪಿಗಳಿಗೆ ನೀಡುವ ಶಿಕ್ಷೆ ಒಂದು ಪಾಠವಾಗಬೇಕು. ಎಸ್​ಡಿಪಿಐ, ಪಿಎಫ್​ಐ ಕಾರ್ಯಕರ್ತರು ಮುಂದೆ ಎಂದಿಗೂ ಇಂತಹ ಪ್ರಕರಣಕ್ಕೆ ಕೈ ಹಾಕಬಾರದು ಎಂದು ಅವರು ಆಗ್ರಹಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *