ಮಡಿಕೇರಿ : SSLC ವಿಧ್ಯಾರ್ಥಿನಿಯ ತಲೆ ಕತ್ತರಿಸಿ ಭೀಕರ ಹತ್ಯೆ ಮಾಡಿ,ಆತ್ಮಹತ್ಯೆ ಮಾಡಿದನೆಂದು ಸುದ್ದಿ ಹರಡಿ,ಕೋವಿ ಹಿಡಿದು ಕಾಡಿಗೆ ಪರಾರಿಯಾದ ಆರೋಪಿ ಕೊನೆಗೂ ಅರೆಸ್ಟ್ !

ಮಡಿಕೇರಿ : ಅಮಾಯಕ ಯುವತಿಯ ರುಂಡ ಕಡಿದು ಆತ್ಮ ಹತ್ಯೆ ಮಾಡಿದನೆಂದು ಸುಳ್ಳು ಸುದ್ದಿ ಹರಡಿ ಕಾಡಿಗೆ ಕೋವಿ ಹಿಡಿದು ಪರಾರಿಯಾದ ಖತರ್ನಾಕ್ ಕೊಲೆಗಾರ 34 ವರ್ಷದ ಪ್ರಕಾಶನಿಗೆ ಪೊಲೀಸರು ನಿನ್ನೆ ಹುಡುಕಾಟ ನಡೆಸಿದ್ದರು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಏನು ತಿಳಿಯದ ಯುವತಿಯನ್ನು ಮದುವೆ ಆಗಲು ಹೊರಟಿದಲ್ಲದೆ ಯುವತಿಯನ್ನು ಬರ್ಬರ ಹತ್ಯೆ ಮಾಡಿದ್ದಾನೆ.ಕಾಡಿನಲ್ಲಿ ಪತ್ತೆಯಾದ ಪ್ರಕಾಶ್‌ನನ್ನು ಪೊಲೀಸರು ಸದ್ಯ ಸೋಮವಾರಪೇಟೆ ಠಾಣೆಗೆ ಕರೆತರುತ್ತಿದ್ದಾರೆ.ಆರೋಪಿ ಯುವತಿಯ ರುಂಡವನ್ನು ಎಲ್ಲಿ ಬಿಸಾಕಿದ್ದಾನೆಂದು ಇನ್ನು ತನಿಖೆಯಲ್ಲಿ ತಿಳಿಯಬೇಕಾಗಿದೆ .
SSLC ಬಾಲಕಿಯ ರುಂಡ ಕತ್ತರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಪ್ರಕಾಶ ಅಪ್ರಾಪ್ತ ಬಾಲಕಿಯನ್ನು ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಆಕೆಯ ರುಂಡ ಕತ್ತರಿಸಿದ್ದನು. ನಂತರ ಕೋವಿ ಹಿಡಿದು ಕಾಡಿನತ್ತ ಪರಾರಿಯಾಗಿದ್ದನು. ಪರಾರಿಯಾಗಿದ್ದ ಪ್ರಕಾಶನಿಗೆ ಪೊಲೀಸರು ನಿನ್ನೆ ಹುಡುಕಾಟ ನಡೆಸಿದ್ದರು. ಆದರಿಂದ ಕೊಲೆಗಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೊಲೆ ಮಾಡಿದ ಒಂದು ದಿನದ ಬಳಿಕ 34 ವರ್ಷದ ಪ್ರಕಾಶನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮೀನಾಳಿಗೆ 18 ವರ್ಷ ತುಂಬಿದ ಬಳಿಕವೇ ವಿವಾಹ ಮಾಡುವಂತೆ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದಾರೆ. ಇಷ್ಟೆಲ್ಲ ಆದ ಬಳಿಕ ಪ್ರಕಾಶ್​ ಮರ ಕಡಿಯುವ ಮಚ್ಚಿನೊಂದಿಗೆ ಮೀನಾಳ ಮನೆಗೆ ಬಂದಿದ್ದು ಮೀನಾ ಹಾಗೂ ಅವಳ ಪೋಷಕರ ಜೊತೆ ಜಗಳವಾಡಿದ್ದಾನೆ. 18 ವರ್ಷ ಆಗುವವರೆಗೆ ಮದುವೆ ಬೇಡ ಎಂದು ಪೋಷಕರು ಹೇಳಿದ್ದು ಕೋಪಗೊಂಡು ಜಗಳ ಜೋರಾಗಿದೆ. ಇದರಿಂದ ಕುಪಿತಗೊಂಡ ಪ್ರಕಾಶ್ ಮಚ್ಚಿನಿಂದ ಮೊದಲು ತಾಯಿ ಜಾನಕಿಯ ಕೈ ಕಡಿದಿದ್ದಾನೆ, ಜಾನಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಡೆಯಲು ಬಂದ ತಂದೆ ಸುಬ್ರಮಣಿಗೆ ಜಾಡಿಸಿ ಒದ್ದ ರಭಸಕ್ಕೆ ಅವರೂ ಕುಸಿದು ಬಿದ್ದಿದ್ದಾರೆ. ಬಳಿಕ ಪ್ರಕಾಶ್, ಮೀನಾಳನ್ನ ಎಳೆದೊಯ್ದಿದ್ದಾನೆ. ಮನೆಯಿಂದ ಅಂದಾಜು 300 ಮೀಟರ್ ದೂರದವರೆಗೆ ಎಳೆದೊಯ್ದು ಮೀನಾಳ ಕುತ್ತಿಗೆಯನ್ನೇ ಕಡಿದು ರುಂಡ ಮುಂಡ ಬೇರ್ಪಡಿಸಿ ರುಂಡದೊಂದಿಗೆ ಪರಾರಿಯಾಗಿದ್ದ. ಕಾಡಿನಲ್ಲಿ ಪತ್ತೆಯಾದ ಪ್ರಕಾಶ್‌ನನ್ನು ಪೊಲೀಸರು ಕರೆತರುತ್ತಿದ್ದಾರೆ. ಸದ್ಯ ಸೋಮವಾರಪೇಟೆ ಠಾಣೆಗೆ ಕರೆತರುತ್ತಿದ್ದು ಹೈ ಕ್ಲಾಸ್ ಪೊಲೀಸ್ ಟ್ರೀಟ್ಮೆಂಟ್ ನಿಂದ ಎಲ್ಲ ಬಾಯಿಬಿಡಬಹುದೆಂದು ತಿಳಿಯಲಾಗಿದೆ.

News Editor

Learn More →

Leave a Reply

Your email address will not be published. Required fields are marked *