
ಮಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನ ಅಶ್ಲೀಲ ಅವಾಂತರ ಸುದ್ದಿಯಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರತಿಷ್ಠಿತ ಕುರುಂಜಿ ವೆಂಕಟರಮಣ ಗೌಡರ ಮೊಮ್ಮಗನಿಂದ ಮತ್ತೊಂದು ಧರ್ಪದ ಅವಾಂತರ ಬೆಳಕಿಗೆ ಬಂದಿದೆ. ಖಾಸಗಿ ವೆಬ್, ಯುಟ್ಯೂಬ್ ಚಾನಲ್ ಮೂಲಕ ಪವರ್ ಗಳಿಸುವ ಹುಚ್ಚು ಚಟ ಹೊಂದಿರುವ ಅಕ್ಷಯ್ ಎಂಬ ವ್ಯಕ್ತಿ ಇತರ ಸುದ್ದಿ ವಾಹಿನಿಗಳ ಮೇಲೆ ಸವಾರಿ ಮಾಡಲು ಮುಂದಾಗಿದ್ದಾರೆ. ಕುರುಂಜಿ ವೆಂಕಟರಮಣ ಗೌಡರು, ಸಾಮಾಜಿಕ ನ್ಯಾಯ, ಸತ್ಯ – ಧರ್ಮ ಎಂದು ಧರ್ಮಾತ್ಮರಾಗಿ ಬದುಕಿದವರು. ಅತಂಹ ಶ್ರೇಷ್ಠ ವ್ಯಕ್ತಿಯ ಮೊಮ್ಮಗನಾಗಿ ಇಂತಹ ನೀಚ ಕೃತ್ಯ ನಡೆಸುತ್ತಿರುವುದು ಖೇದಕರ.
‘ ನ್ಯೂಸ್ ನಾಟ್ ಔಟ್ ‘ ಎಂಬ ಹೆಸರಿನಲ್ಲಿ ಒಂದು ವೆಬ್ ಹಾಗೂ ಯುಟ್ಯೂಬ್ ಚಾನಲ್ ಆರಂಭಿಸಿ, ಹೇಮಂತ್ ಎಂಬ ವ್ಯಕ್ತಿಯನ್ನು ಪ್ರಧಾನ ಸಂಪಾದಕನಾಗಿ ನೇಮಿಸಿ, ಮಿಸ್ಟರ್ ಅಕ್ಷಯ್ ಕುರುಂಜಿ ಬೇನಾಮಿಯಾಗಿ ನಿರಂಕುಶ ಪ್ರಭುತ್ವ ಸಾಧಿಸುವ ಭರದಲ್ಲಿ, ತನ್ನ ಚಾನಲ್ ಅಲ್ಲದೆ ಇತರ ವಾಹಿನಿಗಳ ಮೇಲೆ ಧರ್ಪ ತೋರಿಸಲು ಮುಂದಾಗಿದ್ದಾರೆ. ತನ್ನ ವಾಹಿನಿಯಲ್ಲಿ ಬಂದ ವರದಿಗಳು ಬೇರೆ ವಾಹಿನಿಯಲ್ಲಿ ಇರಬಾರದು ಎಂಬ ದುರುದ್ದೇಶದಿಂದ, ವರದಿ ಬಿತ್ತರಿಸಿದ ವಾಹಿನಿಗಳ ಲೋಗೋ ವರದಿ ಬಳಸಿ, ನ್ಯೂಸ್ ನಾಟ್ ಔಟ್ ವೆಬ್ ಸೈಟ್ ನಲ್ಲಿ, ಅಪಮಾನಕಾರಿ ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದಾರೆ. ಇದನ್ನು ಕೇಳಲು ಮುಂದಾದ್ರೆ ಅವಾಚ್ಯವಾಗಿ ನಿಂದಿಸಿ, ಸುಳ್ಳು ದೂರು ನೀಡಲು ಮುಂದಾಗುತ್ತಾರೆ. ತಮ್ಮ ಹಣ ಭಲ ಹಾಗೂ ಪ್ರಭಾವ ಬಳಸಿ, ಇತರ ವಾಹಿನಿಗಳ ಮೇಲೆ ಸವಾರಿ ಮಾಡಲು ಮುಂದಾಗುವ ಮಹಾನ್ ಉದ್ಯಮಿಗಳಿಗೆ ಆ ಸುಳ್ಯದ ಚೆನ್ನಕೇಶವನೇ ಒಳ್ಳೆ ಬುದ್ದಿಕೊಡಬೇಕಷ್ಟೇ…!!!


