ಪುಂಜಾಲಕಟ್ಟೆ: ಕೋವಿ ಠೇವಣಿದಾರ ರೈತರಿಂದ ಮತದಾನ ಬಹಿಷ್ಕರಿಸಿ ಫ್ಲೆಕ್ಸ್ ಅಳವಡಿಕೆ

ಪುಂಜಾಲಕಟ್ಟೆ: ಚುನಾವಣೆಯ ಸಂದರ್ಭದಲ್ಲಿ ರೈತರು ತಮ್ಮ ಪರವಾನಗಿ ಹೊಂದಿದ ಕೋವಿಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಇರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದ ವಿರುದ್ಧ ಬಂಟ್ವಾಳ ತಾಲೂಕಿನ ರೈತರೋರ್ವರು ಚುನಾವಣಾ ಮತ ಬಹಿಷ್ಕಾರಕ್ಕೆ ಕರೆ ನೀಡಿ‌ ಪ್ಲೆಕ್ಸ್ ಅಳವಡಿಸಿದ್ದಾರೆ.

ಕೃಷಿಕರ ಕೋವಿಯನ್ನು ಪ್ರತಿ ಸಲ ಚುನಾವಣಾ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿ ಇಡುವುದರಿಂದ ಪ್ರಾಣಿಗಳ ಹಾವಳಿಯಿಂದ ಕೃಷಿ ನಷ್ಟಕ್ಕೆ ಒಳಗಾಗುತ್ತಿದೆ. ಹೀಗಾಗಿ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಮತ್ತು ತೆಂಕಕಜೆಕಾರು ಗ್ರಾಮದ ಎಲ್ಲಾ ಅಪರಾಧ ಇಲ್ಲದ ಕೋವಿ ಬಳಕೆದಾರರು ಚುನಾವಣಾ ಮತ ಬಹಿಷ್ಕರಿಸುವಂತೆ ವಿನಂತಿಸಿ ಬಂಟ್ವಾಳ ತಾ.ಪಂ.ಮಾಜಿ ಅಧ್ಯಕ್ಷರಾದ ಕೆ.ಎ.ಸತೀಶ್ಚಂದ್ರ ಹೊಸಮನೆ ಅವರು ಕೋವಿ ಬಳಕೆದಾರರ ಪರವಾಗಿ ಪ್ಲೆಕ್ಸ್ ಅಳವಡಿಸಿ ಎಚ್ಚರಿಕೆ ನೀಡಿದ್ದಾರೆ.

ಬಂಟ್ವಾಳ ತಾಲೂಕಿನಲ್ಲೂ ಹಲವಾರು‌ ಮಂದಿ ಕೃಷಿಕರು‌ ಪರವಾನಿಗೆಯುಳ್ಳ ಕೋವಿಯನ್ನು ಹೊಂದಿದ್ದು, ಜಿಲ್ಲಾಧಿಕಾರಿಯವರ ಆದೇಶದಂತೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿರುವ ರೈತರು ಚುನಾವಣೆಯ ಹಿನ್ನಲೆಯಲ್ಲಿ ಈಗಾಗಲೇ ತಮ್ಮ ಕೋವಿಯನ್ನು ಡೆಪಾಸಿಟ್ ಇರಿಸಿರುವುದು‌ ಇಲ್ಲಿ‌ ಗಮನಾರ್ಹ ಅಂಶವಾಗಿದೆ.

ಕೋವಿ ಠೇವಣಾತಿ ವಿನಾಯಿತಿಗಾಗಿ ಜಿಲ್ಲಾಧಿಕಾರಿ ನೇತೃತ್ವದ ಸ್ಟೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸಿದ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದ ಸುಳ್ಯ ಮತ್ತು ಕಡಬದ ಸುಮಾರು 197 ರೈತರಿಗೆ ವಿನಾಯಿತಿ ನೀಡಿ ಸ್ಟೀನಿಂಗ್ ಕಮಿಟಿ ಮತ್ತು ಹೈಕೋರ್ಟ್ ಆದೇಶಿಸಿದೆ.

ಆದರೆ ಬಂಟ್ವಾಳ ಪರಿಸರದ ಕೋವಿ ಹೊಂದಿದ ರೈತರು‌ ಯಾರು ಕೂಡ ವಿನಾಯಿತಿ ಕೋರಿ ನ್ಯಾಯಾಲಯದ ಮೋರೆ ಹೋದ ಬಗ್ಗೆ ಸ್ಪಷ್ಟತೆ‌ ಇಲ್ಲ. ಇದೀಗ ಬಂಟ್ವಾಳದಲ್ಲಿ ಪರವಾನಿಗೆ ಹೊಂದಿರುವ ಕೋವಿದಾರರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?