ಕಡಬ: ಮೂಲ ಸೌಕರ್ಯ ಕೊರತೆಗಳ ನಡುವೆಯೂ ಪಿಯುಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ತೋರಿದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು.

ಇತ್ತೀಚೆಗೆ ಆಸಿಡ್ ದಾಳಿ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜು ಪಿಯುಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಪರೀಕ್ಷಾ ಸಮಯದಲ್ಲೇ ಮೂವರು ವಿದ್ಯಾರ್ಥಿಗಳು ಆಸಿಡ್ ದಾಳಿಗೆ ಒಳಗಾಗಿದ್ದ ಕಾರಣ ಬಹುತೇಕ ಮಕ್ಕಳು ಆತಂಕ,ಒತ್ತಡದಿಂದಲೇ ಪರೀಕ್ಷೆಗೆ ಹಾಜರಾಗಿದ್ದರು.   ಒಟ್ಟು 160 ಮಂದಿ ಪರೀಕ್ಷೆ ಬರೆದಿದ್ದು  154 ಮಂದಿ ಉತ್ತೀರ್ಣರಾಗಿದ್ದಾರೆ.ಈ ಮೂಲಕ ಒಟ್ಟು 95.87 % ಫಲಿತಾಂಶ ಕಾಲೇಜಿಗೆ ದೊರಕಿದೆ.  6 ಮಂದಿ ಅನುತ್ತೀರ್ಣರಾಗಿದ್ದು  ಇದರಲ್ಲಿ ಮೂವರು ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ಆಸಿಡ್ ದಾಳಿಗೆ ಒಳಗಾದ ವಿದ್ಯಾರ್ಥಿಗಳಾಗಿದ್ದಾರೆ.
ಕಲಾ ವಿಭಾಗದಲ್ಲಿ 56 ಮಂದಿ ಪರಿಕ್ಷೇಗೆ ಹಾಜರಾಗಿದ್ದು 55 ಮಂದಿ ಉತ್ತೀರ್ಣರಾಗಿದ್ದಾರೆ. ಇನ್ನು  ವಾಣಿಜ್ಯ ವಿಭಾಗದಲ್ಲಿ 59 ಮಂದಿ ಪರೀಕ್ಷೆ ಬರೆದಿದ್ದು 58 ಮಂದಿ ಉತ್ತೀರ್ಣರಾಗಿದ್ದಾರೆ.ವಿಜ್ಞಾನ ವಿಭಾಗದಲ್ಲಿ45 ಮಂದಿ ಪರೀಕ್ಷೆ ಬರೆದು 41  ಮಂದಿ ಉತ್ತೀರ್ಣರಾಗಿದ್ದಾರೆ.

News Editor

Learn More →

Leave a Reply

Your email address will not be published. Required fields are marked *