ಸಿಎಂ ಸಿದ್ದರಾಮಯ್ಯ ನಮ್ಮವರಲ್ಲ. ಡಿ ಕೆ ಸುರೇಶ್

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ತುಂಬಾ ಹೈಲೇಟ್ ಆಗಿ ಮಾರ್ಪಟ್ಟಿದೆ. ಡಿಕೆ ಬ್ರದರ್ಸ್ ಗಂತೂ ಈ ಸಲ ಚುನಾವಣೆ ಅಳಿವು-ಉಳಿವಿನ ಪ್ರಶ್ನೆ ಆಗಿದೆ. ಹೀಗಾಗಿ ಗೆಲುವು ತುಂಬಾ ಅನಿವಾರ್ಯ ಕೂಡ ಹೌದು. ಈ ಹಿನ್ನೆಲೆಯಲ್ಲಿ ಡಿ ಕೆ ಸುರೇಶ್(DK Suresh) ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಈ ಚುನಾವಣಾ ಪ್ರಚಾರ ವೇಳೆ ಅವರು ಸಿಎಂ ಸಿದ್ದರಾಮಯ್ಯನವರ(CM Siddaramaiah) ಮೂಲ ನಮ್ಮದಲ್ಲ ಎಂದು ಹೇಳಿದ್ದಾರೆ. ರಾಮನಗರದಲ್ಲಿ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ ಸುರೇಶ್, ಕಾರ್ಯಕರ್ತರಿಗೆ ಕಿವಿಮಾತು ಹೇಳುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿಚಾರವನ್ನು ಪ್ರಸ್ತಾಪ ಮಾಡಿ, ಸಿದ್ದರಾಮಯ್ಯನವರ ಮೂಲ ನಮ್ಮ ಪಕ್ಷ ಅಲ್ಲ, ಬೇರೆ ಪಕ್ಷದಿಂದ ಬಂದವರು. ಆದರೆ 2 ಬಾರಿ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ. ಇತರ ಪಕ್ಷಗಳ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಮಾತನಾಡುವಾಗ ಅವರು ಈ ವಿಚಾರ ಪ್ರಸ್ತಾಪಿಸಿದ್ದು, ಪಕ್ಷಕ್ಕೆ ಯಾರೇ ಬಂದರೂ ಅವರಿಗೆ ಅಡ್ಡ ಹಾಕಲು ಹೋಗಬೇಡಿ. ಏಕೆಂದರೆ ಯಾರ ಹಣೆಯಲ್ಲಿ ಏನು ಬರೆದಿದ್ದರೆ ಎಲ್ಲವೂ ಆಗುತ್ತೆ, ಹುಡುಕಿ ಬರುತ್ತೆ, ಇಲ್ಲಾಂದ್ರೆ ಆಗಲ್ಲ. ನೀವು ಯಾರನ್ನು ಅಡ್ಡಹಾಕಬೇಡಿ, ನೀವು ಅಡ್ಡ ಹಾಕಿದರೆ ಅವರು ಲೀಡರ್ ಆಗ್ತಾರೆ. ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನವರು ಬೀಗ ಹಾಕಿ ಕಳುಹಿಸಿದ್ದರು. ಅವರ ಯೋಗ ಇಲ್ಲಿ ಇತ್ತು, ಹಾಗಾಗಿ ಅವರು ಇಲ್ಲಿಗೆ ಬಂದರು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರನ್ನು ಮತ್ತೆ ಹಾಡಿ ಹೊಗಳಿದ ಅವರು ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಹೊಸ ಕಾಯಕಲ್ಪ ಕೊಟ್ಟಿದ್ದಾರೆ. ಬಡವರಿಗಾಗಿ ಒಂದಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ. ಹಾಗಾಗಿ ಹಣೇಲಿ ಬರೆದಿದ್ದರೆ ಎಲ್ಲಾ ಆಗುತ್ತೆ, ಬರೆದಿಲ್ಲ ಅಂದ್ರೆ ಏನೂ ಮಾಡೋಕಾಗಲ್ಲ ಎಂದು ನುಡಿದಿದ್ದಾರೆ

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!