ಸುರತ್ಕಲ್: ತಂಡದಿಂದ ಆಟೋ ಚಾಲಕನ ಮೇಲೆ ಹಲ್ಲೆ ; ಪ್ರಕರಣ ದಾಖಲು

ಸುರತ್ಕಲ್ : ಆಟೋ ಚಾಲಕನ ಮೇಲೆ ತಂಡವೊಂದು ರಾತ್ರಿ ಸಮಯದಲ್ಲಿ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಳವಾರಿನ ಆಶ್ರಯ ಕಾಲನಿ ಸಮೀಪ ನಡೆದಿದೆ.

ಆಟೋ ಚಾಲಕ ಅಝರುದ್ದೀನ್ ಎಂಬುವವರು ತಮ್ಮ ಆಟೋದಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಪ್ರಶಾಂತ್ ಕಳವಾರು, ಗಣೇಶ, ಪುನೀತ್ ಹಾಗೂ ಇನ್ನಿತರರು ರಸ್ತೆಗೆ ಅಡ್ಡವಾಗಿ ಮಲಗಿ ರಸ್ತೆಯಲ್ಲಿ ಸಂಚರಿಸಲು ಅಡ್ಡಿಪಡಿಸಿದ್ದು, ಚಾಲಕನು ಮನೆಗೆ ಹೋಗಲು ದಾರಿ ಬಿಡುವಂತೆ ವಿನಂತಿಸಿದ್ದಾರೆ.

ಈ ಸಂದರ್ಭ ಆರೋಪಿಗಳಾದ ಪ್ರಶಾಂತ್ ಕಳವಾರು ಹಾಗೂ ಗಣೇಶ ಎಂಬುವವರು ಅಝರುದ್ದೀನ್ ಅವರನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಅವರ ಕುತ್ತಿಗೆಗೆ ಹಾಗೂ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ನಂತರ ಅವರ ಜೊತೆಯಲ್ಲಿದ್ದ ಮತ್ತಿಬ್ಬರು ಕೂಡ ಹಲ್ಲೆ ಮಾಡಿದ್ದಾರೆ. ಜೊತೆಗೆ ಪ್ರಶಾಂತ ಹಾಗೂ ಆತನ ಜೊತೆಗಿದ್ದ ಮತ್ತೋರ್ವ ಯುವಕ ಕೊಲೆ ಬೆದರಿಕೆಯೊಡ್ಡಿರುವುದಾಗಿ ಅಝರುದ್ದೀನ್ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

News Editor

Learn More →

Leave a Reply

Your email address will not be published. Required fields are marked *