ಉಳ್ಳಾಲ:ವ್ಯಕ್ತಿಯೊಬ್ಬರನ್ನು ಮಧ್ಯಾಹ್ನ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಉಳ್ಳಾಲ: ವ್ಯಕ್ತಿಯೊಬ್ಬರನ್ನು ಮಧ್ಯಾಹ್ನ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಪಂಜಿಮೊಗರುವಿನಲ್ಲಿ 13 ವರ್ಷಗಳ ಹಿಂದೆ ನಡೆದ ತಾಯಿ ಹಾಗೂ ಮಗಳ ಜೋಡಿ ಕೊಲೆ ಪ್ರಕರಣದಲ್ಲಿ ಕೊಲೆಗೀಡಾದ ಮಹಿಳೆಯ ಪತಿ,ಉಳ್ಳಾಲ ನಗರಸಭೆ ಕಚೇರಿ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹಮೀದ್ ಪಿ.ಎಂ. ಇರಿತಕ್ಕೆ ಒಳಗಾದವರು.‌



ಗಾಯಗೊಂಡ ಹಮೀದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಬಂದರು ಭಾಗದ ಈಜುಪಟುವೊಬ್ಬರು ಈ ಕೃತ್ಯ ಎಸಗಿರುವ ಮಾಹಿತಿ ಇದೆ‌ ಎನ್ನಲಾಗಿದೆ. ಹಣದ ವಿಚಾರವಾಗಿ ಕೃತ್ಯ ನಡೆದಿರುವ ಸಾಧ್ಯತೆಗಳಿವೆ ಎಂದು ಉಳ್ಳಾಲ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

ಪಂಜಿಮೊಗರಿನಲ್ಲಿ 2011ರ ಜೂ. 28ರಂದು ರಝಿಯಾ ಮತ್ತು ಆಕೆಯ ಪುಟ್ಟ ಮಗು ಫಾತಿಮಾ ಜುವಾ ಹತ್ಯೆ ನಡೆದಿತ್ತು. ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಜೋಡಿಕೊಲೆ ಪ್ರಕರಣ ನಡೆದು 13 ವರ್ಷ ಕಳೆದರೂ ಆರೋಪಿಗಳು ಪತ್ತೆಯಾಗಿಲ್ಲ. ಸಿಐಡಿ ತನಿಖೆ ನಡೆದರೂ ಹಂತಕರು ಸಿಕ್ಕಿಲ್ಲ.

News Editor

Learn More →

Leave a Reply

Your email address will not be published. Required fields are marked *