ಉಳ್ಳಾಲ: ಹಿದಾಯತ್ ನಗರ ಹಾಗೂ ಪನೀರ್–ಮಾವಿನಕಟ್ಟೆಯಲ್ಲಿ ನೂತನ ಕಾಂಕ್ರೀಟ್ ರಸ್ತೆಗಳ ಲೋಕಾರ್ಪಣೆ

ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ನಿಧಿಯಿಂದ 13ನೇ ವಾರ್ಡ್‌ನ ಹಿದಾಯತ್ ನಗರ ಹಾಗೂ ಪನೀರ್–ಮಾವಿನಕಟ್ಟೆ ಭಾಗದಲ್ಲಿ ನಿರ್ಮಾಣಗೊಂಡ ಎರಡು ಸುಸಜ್ಜಿತ ಕಾಂಕ್ರೀಟ್ ರಸ್ತೆಗಳು ಲೋಕಾರ್ಪಣೆಗೊಂಡವು.

ಕೋಟೆಕಾರ್ ಪಟ್ಟಣ ಪಂಚಾಯತ್‌ನ 13ನೇ ವಾರ್ಡ್‌ನ ಹಿದಾಯತ್ ನಗರದಲ್ಲಿ ಕೌನ್ಸಿಲರ್ ಸೆಲಿಮಾಬಿ. ಎಂ. ಅವರ ಪ್ರಯತ್ನದಿಂದ ಸೂಕ್ತ ಅನುದಾನ ಮಂಜೂರು ಮಾಡಿಸಿ ನಿರ್ಮಿಸಲಾದ ಗುಣಮಟ್ಟದ ಕಾಂಕ್ರೀಟ್ 3ನೇ ಅಡ್ಡ ರಸ್ತೆಯನ್ನು SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಹಾಗೂ ಕೌನ್ಸಿಲರ್ ಸೆಲಿಮಾಬಿ. ಎಂ. ಅವರು ಉದ್ಘಾಟಿಸಿದರು.

ಅದೇ ರೀತಿ, ಪಟ್ಟಣ ಪಂಚಾಯತ್ ನಿಧಿಯಿಂದ ಪನೀರ್–ಮಾವಿನಕಟ್ಟೆ ಭಾಗದಲ್ಲಿ ಇಕ್ಬಾಲ್ ಅಮ್ಮೆಂಬಳ ಅವರ ಮನೆಯ ಬಳಿಯಿಂದ ಪ್ರೊ. ಡಾ. ಉದಯ ಬಾರ್ಕೂರು ಅವರ ಮನೆಯವರೆಗೆ ನಿರ್ಮಿಸಲಾದ ಅತ್ಯುನ್ನತ ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ಅಶ್ರಫ್ ಅಡ್ಡೂರು ಹಾಗೂ ಎಂ.ಕೆ. ಬಾವುಚ್ಚ ಅವರು ಉದ್ಘಾಟಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದರು.

ಕಾರ್ಯಕ್ರಮವು ಅಝೀಝ್ ಪನೀರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರು ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಕೋಶಾಧಿಕಾರಿ ಜುನೈದ್ ಕುತ್ತಾರ್, ಕಾರ್ಯದರ್ಶಿಗಳಾದ ಅಶ್ರಫ್ ಮಂಚಿ ಹಾಗೂ ಶಾಹೀದ್ ಕಿನ್ಯ, SDPI ಮುಖಂಡರಾದ ಹಮೀದ್ ಹೊಸಂಗಡಿ, ಫಿರೋಝ್ ಅಬ್ಬಾಸ್, ಬಸೀರ್ ಅಜ್ಜಿನಡ್ಕ, ಶಾಫಿ ಕಿನ್ಯ, ನಾಸೀರ್ ಕೋಡಿ, ಶಾಕೀರ್ ಪನೀರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪಕ್ಷದ ಹಿರಿಯರು ಹಾಗೂ ಹಿತೈಷಿಗಳಾದ ಎಂ.ಕೆ. ಬಾಹುಚ್ಚ, ಎಂ.ಕೆ. ಫಾರೂಕ್, ಇಶಾಕ್, ಅಬ್ಬು, ಪಿ.ಯು. ರಿಯಾಝ್, ಉದ್ಯಮಿ ಆಸೀಫ್ ಕಿನ್ಯ, ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ಸಾಜಿದ ಉಕ್ಕುಡ, ಅಸ್ಮಾ ಪನೀರ್ ಹಾಗೂ ವಾರ್ಡ್‌ನ ನಾಗರಿಕರು ಮತ್ತು ಪಕ್ಷದ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಿ.ಎ. ಅಬೂಸಾಲಿಹ್ ಕಾರ್ಯಕ್ರಮ ನಿರೂಪಿಸಿದರು.

ವಾರ್ಡ್‌ನ ನಾಗರಿಕರ ಮೂಲಭೂತ ಸೌಕರ್ಯಗಳ ಅಗತ್ಯತೆಗಳನ್ನು ಅರಿತು, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಕೌನ್ಸಿಲರ್ ಸೆಲಿಮಾಬಿ. ಎಂ. ಅವರ ಕಾರ್ಯವೈಖರಿಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

13ನೇ ವಾರ್ಡ್‌ನಲ್ಲಿ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಅಭಿವೃದ್ಧಿ ಯೋಜನೆಗಳು ಸಾಕಾರಗೊಳ್ಳಲಿ ಹಾಗೂ ಜನಸೇವೆಯ ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂಬ ಆಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *