ಪುತ್ತೂರು ದಸರಾ ಮೆರವಣಿಗೆ: ಅ.21ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಸಂಚಾರ ಮಾರ್ಗ ಬದಲಾವಣೆ.

ಸಾರ್ವಜನಿಕ ಪ್ರಕಟಣೆ 🚨
ಪುತ್ತೂರು ಸಂಚಾರ ಪೊಲೀಸ್ ಠಾಣೆ, ಪುತ್ತೂರು
ಶಾರದೋತ್ಸವ ಮೆರವಣಿಗೆ ಪ್ರಯುಕ್ತ ಸಂಚಾರ ಮಾರ್ಗ ಬದಲಾವಣೆ
ಸಾರ್ವಜನಿಕರ ಗಮನಕ್ಕೆ,
ದಿನಾಂಕ 21-10-2026 ರಂದು ಸಂಜೆ 5:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಪುತ್ತೂರು ಪೇಟೆಯಲ್ಲಿ ಶಾರದೋತ್ಸವ ಮೆರವಣಿಗೆ ನಡೆಯಲಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಾರ್ವಜನಿಕರು ಈ ಕೆಳಗಿನ ಸೂಚನೆಯನ್ನು ಪಾಲಿಸಲು ಕೋರಲಾಗಿದೆ.
📢 ಸಾರ್ವಜನಿಕರು ಈ ಸಮಯದಲ್ಲಿ ಪುತ್ತೂರು ಪೇಟೆಯ ಒಳಭಾಗದ ರಸ್ತೆಗಳನ್ನು ಬಳಸದೆ, ಅಶ್ವಿನಿ ಸರ್ಕಲ್.ಪರ್ಲಡ್ಕ.ಲಿನೇಟ್ ಜಂಕ್ಷನ್ ಹೈವೇ ರಸ್ತೆಯನ್ನು ಬಳಸಿಕೊಂಡು ತಮ್ಮ ಪ್ರಯಾಣವನ್ನು ಮುಂದುವರಿಸುವಂತೆ ಹಾಗೂ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಸಂಚರಿಸುವವರು ಪಡೀಲ್ ಜಂಕ್ಷನ್ ಮೂಲಕ.ಹಾಗೂ ಪುತ್ತೂರು ಪೇಟೆ ಕಡೆಗೆ ಕೊಟೆಚ ಕ್ರಾಸ್ ಮೂಲಕ ಸಂಚರಿಸುವಂತೆ ವಿನಂತಿಸಲಾಗಿದೆ.
🚗 ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಹಕರಿಸಿ.
ಸಾರ್ವಜನಿಕರು ಪುತ್ತೂರು ಸಂಚಾರ ಪೊಲೀಸರೊಂದಿಗೆ ಸಹಕರಿಸಿ, ಸಂಚಾರ ನಿಯಮಗಳನ್ನು ಪಾಲಿಸುವಂತೆ ಕೋರಲಾಗಿದೆ.
ಇಂತಿ,
ಪುತ್ತೂರು ಸಂಚಾರ ಪೊಲೀಸ್ ಠಾಣೆ, ಪುತ್ತೂರು
🙏 ಸಾರ್ವಜನಿಕರ ಸಹಕಾರವೇ ನಮ್ಮ ಆದ್ಯತೆ 🙏

News Editor

Learn More →

Leave a Reply

Your email address will not be published. Required fields are marked *