
ಪುತ್ತೂರು: ಮಾಹಿತಿ ನೀಡದೆ ಅಂಗಡಿ ತೆರವು ಆರೋಪ – ಭ್ರಷ್ಟಾಚಾರದ ಅನುಮಾನಕ್ಕೆ ಕಾರಣವಾದ ಕ್ರಮ..!!
ಪುತ್ತೂರು: ಕೇಪುಳು ಸಮೀಪ ಅಂಗಡಿಯೊಂದನ್ನು ಯಾವುದೇ ಮುನ್ನೋಟಿಸ್ ಅಥವಾ ಮಾಹಿತಿ ನೀಡದೆ ತೆರವುಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕ್ರಮದಿಂದ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗಡಿ ತೆರವು ಕಾರ್ಯಾಚರಣೆಯ ಸಂದರ್ಭ ಹೆಲ್ತ್ ಇನ್ಸ್ಪೆಕ್ಟರ್ ರಾಮಚಂದ್ರ ಅವರು ಸ್ಥಳದಲ್ಲಿದ್ದರೆನ್ನಲಾಗಿದ್ದು, ಅವರ ಹಾಜರಾತಿ ಹಾಗೂ ಕಾರ್ಯಾಚರಣೆಯ ಕ್ರಮದ ಕುರಿತು ಸ್ಥಳೀಯರಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ.
ಯಾವುದೇ ಮುನ್ನೋಟಿಸ್ ನೀಡಲಾಗಿತ್ತೇ, ತೆರವು ಕಾರ್ಯಾಚರಣೆಗೆ ಕಾನೂನುಬದ್ಧ ಆದೇಶವಿತ್ತೇ ಹಾಗೂ ಕಾರ್ಯಾಚರಣೆಯ ಹಿಂದೆ ಯಾವುದೇ ಅಕ್ರಮ ವ್ಯವಹಾರ ಅಥವಾ ಭ್ರಷ್ಟಾಚಾರದ ಅಂಶಗಳಿವೆಯೇ ಎಂಬ ಬಗ್ಗೆ ಸ್ಥಳೀಯರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಈ ಆರೋಪಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸ್ಪಷ್ಟನೆ ಇನ್ನಷ್ಟೇ ಲಭ್ಯವಾಗಬೇಕಿದ್ದು, ವಾಸ್ತವಾಂಶ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.


