ಪ್ರಿಯಕರನೊಂದಿಗೆ ಹೋಟೆಲ್‌ಗೆ ಹೋದವಳು ಶವವಾಗಿ ಪತ್ತೆ.!!

ಹೈದರಾಬಾದ್: ಪ್ರಿಯಕರನೊಂದಿಗೆ ಹೋಟೆಲ್‌ಗೆ ಹೋಗಿದ್ದ ಯುವತಿ ಶವವಾಗಿ ಪತ್ತೆಯಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಮೃತ ಯುವತಿಯನ್ನು ವಿಶಾಖಪಟ್ಟಣ ಮೂಲದ ಶರಾನ್ ನಿಕಿತಾ ಟೊಪ್ನೋ ಹಾಗೂ ಯುವಕನನ್ನು ಶ್ರೀನಿವಾಸ ರವಿ ತೇಜ ಎಂದು ಗುರುತಿಸಲಾಗಿದೆ.

ಸೋಮವಾರ (ಸೆ.22) ಮಧ್ಯಾಹ್ನ ಇಬ್ಬರು ಹೈದರಾಬಾದ್‌ನ ಸಿದ್ದಿಕ್ ನಗರದ ಹೋಟೆಲ್‌ವೊಂದರದಲ್ಲಿ ಚೆಕ್ ಇನ್ ಆಗಿದ್ದರು. ಇಬ್ಬರೂ ಸೇರಿಕೊಂಡು ಒಂದೇ ರೂಮ್ ಪಡೆದುಕೊಂಡಿದ್ದರು.

ಅದೇ ದಿನ ತಡರಾತ್ರಿ 1 ಗಂಟೆ ಸುಮಾರಿಗೆ ಕೊಂಡಪುರದ ಖಾಸಗಿ ಆಸ್ಪತ್ರೆಯವರು ಶರಾನ್ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಯುವತಿಯ ತಲೆಯ ಮೇಲೆ ಗಾಯ ಹಾಗೂ ಊತ ಇರುವುದು ಪತ್ತೆಯಾಗಿದೆ. ಅಲ್ಲದೇ ಹೋಟೆಲ್ ರೂಂನ ಗೋಡೆ ಮತ್ತು ಬೆಡ್‌ಶೀಟ್ ಮೇಲೆಯೂ ರಕ್ತದ ಕಲೆಗಳು ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಇನ್ನೂ ಪೊಲೀಸರ ಮಾಹಿತಿ ಪ್ರಕಾರ, ಶರಾನ್‌ಳನ್ನು ತುರ್ತು ಚಿಕಿತ್ಸೆಗಾಗಿ ರವಿ ತೇಜ ಮತ್ತು ಹೋಟೆಲ್ ಸಿಬ್ಬಂದಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಯುವತಿ ಮೃತಪಟ್ಟಿದ್ದಳು. ಸದ್ಯ ಯುವಕ ರವಿ ತೇಜ ಕೂಡ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ವಿಧಿ ವಿಜ್ಞಾನ ತಂಡವು ಆಗಮಿಸಿ, ಸಾಕ್ಷ್ಯಗಳನ್ನು ಕಲೆ ಹಾಕುತ್ತಿದೆ. ಈ ಪ್ರಕರಣದಲ್ಲಿ ರವಿ ತೇಜ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಯುವಕನ ಪತ್ತೆಹಚಲು ಶೋಧ ಕಾರ್ಯ ಆರಂಭಿಸಿದ್ದಾರೆ.

ಸದ್ಯ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಮಾದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *