ನಿರ್ಲಕ್ಷ್ಯದ ಜೀಪು ಚಾಲನೆ: ತೊಕ್ಕೊಟ್ಟು ಸಮೀಪ ಬೈಕ್ ಸವಾರ ಮೃತ್ಯು.

ಮಂಗಳೂರು: ತೊಕ್ಕೊಟ್ಟು ಸಮೀಪ ಕೊಲ್ಯ ಬ್ರಹ್ಮರ್ಷಿ ಮಂದಿರದ ಮುಂಭಾಗದ ಹೈವೇ 66ರಲ್ಲಿ ಮಧ್ಯಾಹ್ನ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರರ ಸಾವನ್ನಪ್ಪಿದ ಘಟನೆ ನಡೆದಿದೆ. ಘಟನೆಗೆ ಥಾರ್ ಜೀಪ್ ನಲ್ಲಿದ್ದವರ ಮೋಜಿನ ಮತ್ತು ನಿಲ್ಲಕ್ಯದ ನಡವಳಿಕೆ ಕಾರಣ ಎನ್ನಲಾಗಿದೆ.

ಮೃತರನ್ನು ಕೊಲ್ಯ ನಿವಾಸಿ ಸಂತೋಷ ಬೆಳ್ಚಡ (45) ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಥಾರ್ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಕಾರಿನ ಟೈರ್‌ ಒಡೆದು ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದಾರೆ.
ಸಂತೋಷ ಬೆಳ್ಚಡ ದಿನದ ಕೆಲಸ ಮುಗಿಸಿ ಸರಿಯಾಗಿ ಬೈಕ್ ನಲ್ಲಿ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಧರ್ಮಸ್ಥಳಕ್ಕೆ ಭೇಟಿ ನೀಡಿ ಕಾಞಂಗಾಡಿಗೆ ಹಿಂತಿರುಗುತ್ತಿದ್ದ ಕುಟುಂಬವನ್ನು ಹೊತ್ತೊಯ್ಯುತ್ತಿದ್ದ ಮಾರುತಿ ಬಲೆನೊ ಕಾರಿಗೆ ಅಜಾಗರೂಕತೆಯಿಂದ ವೇಗವಾಗಿ ಬಂದ ಥಾರ್ ಜೀಪ್ ಡಿಕ್ಕಿ ಹೊಡೆದಿದೆ.

ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸಂತೋಷ ಬೆಲ್ಚಡ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಮೃತರು ತಂದೆ ತಾಯಿ, ಇಬ್ಬರು ಪುತ್ರಿಯರು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಇನ್ನು ಘಟನೆ ಯ ಬಗ್ಗೆ ಕೊಲ್ಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ,

News Editor

Learn More →

Leave a Reply

Your email address will not be published. Required fields are marked *