ಅಸ್ಸಾಂ ಸರ್ಕಾರದಿಂದ ಬಹುಪತಿತ್ವ ನಿಷೇಧ ಮಸೂದೆ: ಎರಡನೇ ಮದುವೆಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವನೆ

ಇನ್ಮುಂದೆ ಎರಡನೇ ಮದುವೆ ಆದರೆ ಏಳು ವರ್ಷದ ತನಕ ಜೈಲು ಶಿಕ್ಷೆ ಆಗಲಿದೆ. ಈ ಹೊಸ ಮಸೂದೆ ಅಡಿಯಲ್ಲಿ ಬಹುಪತಿತ್ವ ಸಾಬೀತಾದಲ್ಲಿ ಅಪರಾಧಿಗೆ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಸಾಮಾಜಿಕ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನ ಇಲ್ಲಿನ ಸರ್ಕಾರ ನೀಡಿದೆ.

ಬಹುಪತಿತ್ವ ಪದ್ಧತಿಯನ್ನ ಸಂಪೂರ್ಣವಾಗಿ ನಿಷೇಧ ಮಾಡುವ ಕಠಿಣ ಕಾನೂನನ್ನ ಜಾರಿಗೆ ತರಲು ಇದೀಗ ಸಿದ್ಧತೆ ನಡೆಸಿದೆ. ಈ ಹೊಸ ಮಸೂದೆ ಅಡಿಯಲ್ಲಿ ಬಹುಪತಿತ್ವ ಸಾಬೀತಾದಲ್ಲಿ ಅಪರಾಧಿಗೆ ಕನಿಷ್ಠ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಅಸ್ಸಾಂ ನಲ್ಲಿ ಈ ನಿಯಮವನ್ನ ಜಾರಿ ಮಾಡಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಮಹಿಳಾ ಘನತೆ ಮತ್ತು ಸುರಕ್ಷತೆಗೆ ಆದ್ಯತೆ :- ಬಹುಪತಿತ್ವ ಆಧಾರದಿಂದಾಗಿ ಹೆಚ್ಚಾಗಿ ಮಹಿಳೆಯರು ಮಾನಸಿಕ ಮತ್ತು ಆರ್ಥಿಕ ತೊಂದರೆಯನ್ನ ಅನುಭವಿಸುತ್ತಾರೆ. ಮೊದಲ ಪತ್ನಿಗೆ ಕಾನೂನುಬದ್ದ ವಿಚ್ಛೇದನ ನೀಡದೆ ಮತ್ತೊಂದು ವಿವಾಹವಾಗುವುದು ಆಕೆಗೆ ಮಾಡುವ ಬಹು ದೊಡ್ಡ ಅನ್ಯಾಯ ಆಗಿದೆ. ಹಾಗಾಗಿ ಏಳು ವರ್ಷ ಜೈಲು ಶಿಕ್ಷೆಯನ್ನ ವಿಧಿಸಲಿದೆ.

Special Marriage Act, 1954 (ವಿಶೇಷ ವಿವಾಹ ಕಾಯಿದೆ, 1954): ಭಾರತದಲ್ಲಿ ಬಹುಮುಖ್ಯವಾದ ಸರ್ವಧರ್ಮ ಸಮಾನ ವಿವಾಹ ಕಾನೂನು. ಇದು ಅಸ್ಸಾಂ ಸರ್ಕಾರ ಪ್ರಸ್ತಾಪಿಸಿರುವ ಹೊಸ “ಬಹುಪತಿತ್ವ ನಿಷೇಧ” ಮಸೂದೆಗೂ ನೇರವಾಗಿ ಸಂಬಂಧಿಸಿದೆ, ಏಕೆಂದರೆ ಎರಡೂ ಕಾನೂನುಗಳು ವಿವಾಹದ ಕಾನೂನುಬದ್ಧತೆ, ವಿಚ್ಛೇದನ, ಹಾಗೂ ಧರ್ಮಭೇದವಿಲ್ಲದ ಸಮಾನ ಹಕ್ಕುಗಳು ಕುರಿತುವಾಗಿವೆ.

ಧಾರ್ಮಿಕ ಸಮಾನತೆ :- ಈ ಕಾನೂನು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿಲ್ಲ. ಆದರೆ ಧರ್ಮದ ನೆಪದಲ್ಲಿ ಬಹುಪತಿತ್ವವನ್ನ ಸಮರ್ಥನೆ ಮಾಡಿದ್ರೂ ಕೂಡ ರಾಜ್ಯದಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಬಾಲ್ಯ ವಿವಾಹದ ವಿರುದ್ಧ ಕಠಿಣ ಕ್ರಮಗಳನ್ನ ತೆಗೆದುಕೊಂಡ ನಂತರ ಅಸ್ಸಾಂ ಸರ್ಕಾರ ಈಗ ಬಹುಪತಿತ್ವದಂತಹ ಈ ನಿಯಮವನ್ನ ಜಾರಿಗೆ ಮಾಡಿದೆ. ಅದೇ ರೀತಿ ನವೆಂಬರ್ 25ರಂದು ವಿಧಾನಸಭೆಯಲ್ಲಿ ಈ ಮಸೂದೆ ಮಂಡನೆಯಾಗಲಿದ್ದು, ಇದು ರಾಜ್ಯ ರಾಜಕೀಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಮಸೂದೆ ಕಾನೂನಾಗಿ ಜಾರಿಗೆ ಬಂದರೆ ಅಸ್ಸಾಂ ರಾಜ್ಯವು ದೇಶದ ಇತರ ರಾಜ್ಯಗಳಿಗೆ ಸವಾಲುದಾಯಕ ಮಾದರಿಯಾಗಲಿದೆ.

Star Of Kudla

Learn More →

Leave a Reply

Your email address will not be published. Required fields are marked *