ಪುತ್ತೂರು ಸಮೀಪ ಕಾರು–ರಿಕ್ಷಾ ಭೀಕರ ಡಿಕ್ಕಿ: 4 ವರ್ಷದ ಬಾಲಕಿ ಸಾವು

ಪುತ್ತೂರು ತಾಲೂಕಿನ ಕುಂಬ್ರ ಪರ್ಪುoಜಾ ಅಬ್ರಾಡ್ ಸಮೀಪ ಭೀಕರ ಕಾರು ರಿಕ್ಷಾ ಅಪಘಾತ;4ವರೆ ವರ್ಷದ ಮಗು ಸಾವು.ಪುತ್ತೂರು: ಕುಂಬ್ರ ಸಮೀಪದ ಪರ್ಪುಂಜ ಕೊಯಿಲತ್ತಡ್ಕ ಅಬ್ರೋಡ್ ಹಾಲ್ ಬಳಿ ನವೆಂಬರ್ 1ರಂದು ಸಂಜೆ ಈ ಕಾರು ಹಾಗೂ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದು ಬಾಲಕಿ ದುರ್ಮರಣ ಹೊಂದಿದ್ದಾಳೆ.

ಪುತ್ತೂರುನಿಂದ ಕುಟುಂಬ ಸಹಿತ ತಿಂಗಳಾಡಿ ಕಡೆಗೆ ತೆರಳುತ್ತಿದ್ದ ರಿಕ್ಷಾ, ಸುಳ್ಯ ದಿಕ್ಕಿನಿಂದ ಪುತ್ತೂರಿನತ್ತ ಬರುತ್ತಿದ್ದ ಕಾರು ತೀರಾ ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರು ಚಾಲಕನಾದ ಕುಂಬ್ರದ ಬರೋಡ ಬ್ಯಾಂಕ್ ಉದ್ಯೋಗಿ, ಬಸ್ ಅನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಎದುರಿನಿಂದ ಬಂದ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾರೆ.ಅಪಘಾತದಲ್ಲಿ ರಿಕ್ಷಾ ಚಾಲಕ ಹನೀಫ್ ಬನ್ನೂರು ಅವರ 4ವರೆ ವರ್ಷದ ಮಗಳು ಶಜ್ವಾ ಫಾತಿಮಾ ಮೃತಪಟ್ಟಿದ್ದಾಳೆ.ಹನೀಫ್ ರವರ ಪತ್ನಿ, ಅತ್ತೆ ಮತ್ತು 2 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ.ಗಾಯಗೊಂಡವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.ಪುತ್ತೂರು ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿ ಕೊಂಡಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *