‘ಪತಿಯ ಮನೆಯಲ್ಲಿ ನೆಲೆಸುವುದು ಪತ್ನಿಯ ಹಕ್ಕು: ದೆಹಲಿ ಹೈಕೋರ್ಟ್

‘ಪತಿಯ ಮನೆಯಲ್ಲಿ ನೆಲೆಸುವುದು ಪತ್ನಿಯ ಹಕ್ಕು’ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜೀವ್ ನರೂಲಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

ಮದುವೆಯಾದ ನಂತರ ಮಹಿಳೆಯು ತನ್ನ ಪತಿಯ ಮನೆಯಲ್ಲಿ ನೆಲಸುವ ಹಕ್ಕನ್ನು ಪಡೆಯುತ್ತಾಳೆ. ಪತಿಯನ್ನು ಆತನ ಪೋಷಕರು ಮನೆಯಿಂದ ಹೊರಹಾಕಿದರೂ ಸೊಸೆಯು ಅ ಮನೆಯಲ್ಲಿ ಇರುವ ಹಕ್ಕನ್ನು ಹೊಂದಿರುತ್ತಾಳೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

ಮಹಿಳೆಯ ಅತ್ತೆ ಮತ್ತು ಮಾವ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ನರೂಲಾ ವಜಾಗೊಳಿಸಿ ಈ ತೀರ್ಪು ನೀಡಿದ್ದಾರೆ.
ಪ್ರಕರಣ ಏನು?

2010ರಲ್ಲಿ ಅರ್ಜಿದಾರರ ಮಗನ ವಿವಾಹವಾಗಿತ್ತು. ಬಳಿಕ ದಂಪತಿ ಮತ್ತು ಅರ್ಜಿದಾರರು ಒಂದೇ ಮನೆಯಲ್ಲಿ ವಾಸವಿದ್ದರು. ಒಂದು ವರ್ಷದ ಬಳಿಕ ಸಂಬಂಧ ಹಳಸಿ, ಸಿವಿಲ್‌ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಪರಸ್ಪರ ದಾಖಲಿಸಿಕೊಂಡಿದ್ದರು.

ಈ ಮಧ್ಯೆ ಅರ್ಜಿದಾರರು, ತಾವು ವಾಸವಿರುವ ನಿವಾಸವು ತಮ್ಮ ಸ್ವಯಾರ್ಜಿತವಾಗಿದ್ದು, ಇದರಲ್ಲಿ ಸೊಸೆಗೆ ವಾಸ ಮಾಡುವ ಹಕ್ಕಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?