ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ನಲ್ಲಿ 15ನೇ ಹಣಕಾಸು ಯೋಜನೆಯಡಿ ನಿರ್ಮಾಣಗೊಂಡ ಪೌರ ಕಾರ್ಮಿಕರ ವಸತಿಗೃಹ ಮತ್ತು ವಿಶ್ರಾಂತಿ ಕೊಠಡಿ ಉದ್ಘಾಟನೆ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರು ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ, ಪೌರ ಕಾರ್ಮಿಕರು ಸ್ವ ಪಕ್ಷದ ಕೌನ್ಸಿಲರ್ ಇಲ್ಲದೆ ಉದ್ಘಾಟನೆ ಗೊಂಡ ಪೌರ ಕಾರ್ಮಿಕರ ವಸತಿ ಗ್ರಹ ಮತ್ತು ವಿಶ್ರಾಂತಿ ಕೊಠಡಿ ಕೌನ್ಸಿಲರ್ಗಳೇ ಗೈರು!
ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕಾಮಗಾರಿ ನಡೆದಿದ್ದರೆ, ಈ ಅನುದಾನವನ್ನು ಬಿಡುಗಡೆ ಮಾಡಿದವರು ಯಾರು ಮತ್ತು ಕಾಮಗಾರಿಯ ಅನುಮೋದನೆ ನೀಡಿದವರು ಯಾರು?
ಪೌರ ಕಾರ್ಮಿಕರ ಹೆಸರಿನಲ್ಲಿ ಕಾಮಗಾರಿ, ಆದರೆ ಜನಪ್ರತಿನಿಧಿಗಳೇ ಗೈರು — ಕೋಟೆಕಾರ್ ಪಟ್ಟಣ ಪಂಚಾಯತ್ನಲ್ಲಿ ಎಲ್ಲವೂ ಸರಿಯಾಗಿದೆಯೇ?
ಅನುದಾನದ ಬಳಕೆ, ಕಾಮಗಾರಿಯ ವೆಚ್ಚ ಹಾಗೂ ಉದ್ಘಾಟನಾ ಕಾರ್ಯಕ್ರಮದ ಕುರಿತು ಮುಖ್ಯಾಧಿಕಾರಿಗಳು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕಿದೆ.

ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ವಸತಿಗೃಹ ನಿರ್ಮಿಸಲಾಗಿದೆ ಎನ್ನಲಾಗುತ್ತಿದ್ದರೂ, ಕಸದ ದುರ್ವಾಸನೆ ಬೀರುವ ಸ್ಥಳದ ಪಕ್ಕದಲ್ಲೇ ಮನೆ ನಿರ್ಮಿಸಿರುವುದು ಎಷ್ಟು ಸರಿ?
ಆರೋಗ್ಯ ಸಚಿವರೇ, ದಿನವಿಡೀ ಕಸದ ದುರ್ವಾಸನೆಯ ನಡುವೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಅದೇ ಪರಿಸರದಲ್ಲಿ ವಸತಿ ಕಲ್ಪಿಸುವುದು ಅವರ ಆರೋಗ್ಯದ ಹಿತದೃಷ್ಟಿಯಿಂದ ಸರಿಯೇ?

ಪೌರ ಕಾರ್ಮಿಕರ ಆರೋಗ್ಯ, ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕಾದ ಅಧಿಕಾರಿಗಳು, ವಸತಿ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡುವಾಗ ಪರಿಸರದ ಬಗ್ಗೆ ಗಮನ ಹರಿಸಿದ್ದಾರೆಯೇ?
15ನೇ ಹಣಕಾಸು ಯೋಜನೆಯಡಿ ನಿರ್ಮಿಸಲಾದ ಈ ವಸತಿಗೃಹದ ಸ್ಥಳ ಪರಿಶೀಲನೆ ನಡೆಸಿ, ಪೌರ ಕಾರ್ಮಿಕರ ಆರೋಗ್ಯಕ್ಕೆ ಹಾನಿಯಾಗದ ವಾತಾವರಣ ಕಲ್ಪಿಸಲು ಆರೋಗ್ಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

ಈ ಸಂದರ್ಭದಲ್ಲಿ ಉದ್ಘಾಟನೆ ನೆರವೇರಿಸಿದ ಸಂಸದ ಕ್ಯಾ|ಬ್ರಿಜೇಶ್ ಚೌಟ, ಮುಖ್ಯ ಅತಿಥಿಗಳಾಗಿ ಪುತ್ತೂರು ವಿ.ಪ.ಸದಸ್ಯರಾದ ಕಿಶೋರ್ ಕುಮಾರ್, ಕೋಟೆಕಾರ್ ಪ.ಪಂ ಸದಸ್ಯರಾದ ಉದಯ್ ಕುಮಾರ್ ಶೆಟ್ಟಿ, ಕೋಟೆಕಾರು ಪ.ಪಂ ಅಧ್ಯಕ್ಷರಾದ ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


