ಪುತ್ತೂರು : ರಾಜ್ಯದಲ್ಲಿ ಬರಗಾಲದ ಸ್ಥಿತಿ ಎದುರಾಗಿದ್ದು, ನೀರಿನ ಸಮಸ್ಯೆ ಎಲ್ಲರನ್ನೂ ಕಾಡುವ ಲಕ್ಷಣ ಕಾಣುತ್ತಿದೆ. ನೀರಿನ ಕೊರತೆ ಎಲ್ಲೆಂದರಲ್ಲಿ ಕಾಣುತ್ತಿದ್ದು, ನೀರಿನ ಮಿತ ಬಳಕೆ, ನೀರನ್ನು ಪೋಲು ಮಾಡುವುದಕ್ಕೆ ಕಡಿವಾಣ ಹಾಕುವ ಸಮಯ ಬಂದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾತ್ರ ನೀರು ಎಷ್ಟೇ ಪೋಲಾದರೂ ಕೇಳುವವರಿಲ್ಲದಂತಾಗಿದೆ. ಇಲಾಖೆಗಳ ಹೊಂದಾಣಿಕೆಯ ಕೊರತೆಯಿಂದ ಸಾರ್ವಜನಿಕರು ನೀರಿಲ್ಲದೆ ಪರದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ಕೃಷಿ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ನೀರು ಅನಿವಾರ್ಯ. ಅದರಲ್ಲೂ ಕುಡಿಯುವ ನೀರನ್ನು ಪೋಲು ಮಾಡೋದನ್ನು ಊಹಿಸುದೇ ಇತ್ತೀಚಿನ ದಿನಗಳಲ್ಲಿ ಸಾಧ್ಯವಿಲ್ಲ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ವ್ಯಾಪ್ತಿಯ ಹಾರಾಡಿ ಎಂಬಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಅಮೂಲ್ಯ ಜೀವಜಲ ಪೋಲಾಗುತ್ತಿದೆ. ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಗೆ ಹಾನಿಯಾದ ಕಾರಣ ನೀರಿನ ಇಲ್ಲಿ ಬೇಕಾಬಿಟ್ಟಿ ಹರಿದು ಚರಂಡಿ ಸೇರುತ್ತಿದೆ. ನೀರು ಪೂರೈಕೆ ಪುನರಾರಂಭಿಸಬೇಕಾದ ಇಲಾಖೆಗಳು ತಮ್ಮ ಹೊಣೆಗಾರಿಕೆಯನ್ನು ಪರಸ್ಪರರ ಮೇಲೆ ಹೊರಿಸುತ್ತಿರುವ ಪರಿಣಾಮ ಹಾರಾಡಿ ಭಾಗದ ಜನ , ಕಳೆದೊಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿಯಲ್ಲಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ನಡೆಯುವ ವೇಳೆ ಕುಡಿಯುವ ನೀರಿನ ಪೈಪ್ ಒಡೆದಿದೆ. ಇದರಿಂದಾಗಿ ಆ ಭಾಗದ ನಿವಾಸಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.ಸಮಸ್ಯೆ ಬಗೆಹರಿಸಲು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಪೈಪ್ಗಳನ್ನು ಸ್ಥಳಕ್ಕೆ ತಂದು ಇರಿಸಲಾಗಿದೆ.ಆದರೆ ದುರಸ್ತಿ ಕಾರ್ಯ ಮಾತ್ರ ಇನ್ನೂ ಆರಂಭವಾಗಿಲ್ಲ.

ಸ್ಥಳೀಯ ನಿವಾಸಿ ರಾಮ್ ದಾಸ್ ಹಾರಾಡಿ ಮಾತನಾಡಿ ಪೈಪ್ ಒಡೆದಿರುವುದಕ್ಕೆ ರಸ್ತೆ ಕಾಂಕ್ರಿಟೀಕರಣ ಸ್ಥಳೀಯ ನಿವಾಸಿ ಕಾಂಚನ ಸುಂದರ ಭಟ್ ಮಾತನಾಡಿ ಕಾಮಗಾರಿಯೇ ಕಾರಣ ಎಂಬುದು ಜಲಸಿರಿ ಯೋಜನೆ ವಿಭಾಗದ ವಾದವಾದರೆ, ಜಲಸಿರಿಯವರು ಪೈಪ್ಗಳನ್ನು ಸರಿಯಾದ ಆಳದಲ್ಲಿ ಅಳವಡಿಸದಿರುವುದೇ ಸಮಸ್ಯೆಗೆ ಕಾರಣ ಎಂಬುದು ಲೋಕೋಪಯೋಗಿ ಇಲಾಖೆಯ ವಾದ. ಪೈಪ್ಗಳ ವೆಚ್ಚವನ್ನು ಯಾರು ಭರಿಸಬೇಕು ಎಂಬ ವಿಚಾರದಲ್ಲಿ ಎರಡೂ ಇಲಾಖೆಗಳ ನಡುವೆ ಒಮ್ಮತ ಮೂಡದಿರುವುದು ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿದೆ. ರಸ್ತೆಯ ಮೇಲ್ಬಾಗದಲ್ಲೇ ಪೈಪ್ಗಳು ಇರುವುದರಿಂದ ಕಾಂಕ್ರಿಟೀಕರಣ ಕಾಮಗಾರಿಗೂ ತೊಂದರೆಯಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಹೇಳುತ್ತಿದೆ.ಪೈಪ್ ಅಳವಡಿಸುವ ಸಂದರ್ಭದಲ್ಲೇ ಅವುಗಳನ್ನು ಸೂಕ್ತ ಆಳದಲ್ಲಿ ಹಾಕಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂಬುದು ಇಲಾಖೆಯ ಅಭಿಪ್ರಾಯ. ಮತ್ತೊಂದೆಡೆ, ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನವೇ ಹಳೆಯ ಪೈಪ್ಗಳನ್ನು ಬದಲಾಯಿಸುವಂತೆ ಅಂದಾಜು ಪಟ್ಟಿ ನೀಡಿದ್ದರೂ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಸ್ಪಂದಿಸಿಲ್ಲ.
ತಾಂತ್ರಿಕ ಸಮಸ್ಯೆ ಏನೇ ಇರಲಿ, ಅದನ್ನು ಪರಿಹರಿಸಿ ಜನರಿಗೆ ಮೂಲಸೌಕರ್ಯ ಒದಗಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ.ಆದರೆ, ಪರಸ್ಪರ ಆರೋಪ-ಪ್ರತ್ಯಾರೋಪಗಳ ನಡುವೆ ಕುಡಿಯುವ ನೀರಿನಂತಹ ಅತ್ಯಗತ್ಯ ಸೌಲಭ್ಯವೇ ಜನರಿಗೆ ದೊರೆಯದಿರುವುದು ವಿಪರ್ಯಾಸ.


