ಮಂಗಳೂರು : ನಗರ ಹೊರವಲಯದ ಆಡಂಕುದ್ರುವಿನ ನೇತ್ರಾವತಿ ನದಿ ತೀರದಿಂದ ಮರಳನ್ನು ಅಕ್ರಮ ವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳ ವಿರುದ್ದ ಕಂಕನಾಡಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಪಿಕಪ್ನಲ್ಲಿ ನೇತ್ರಾವತಿ ದಕ್ಕೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿರುವುದನ್ನು ಕಂಡು ಹಿಂಬಾಲಿಸಿಕೊಂಡು ಹೋದಾಗ ಅದರ ಚಾಲಕ ಪಿಕಪ್ ನಿಲ್ಲಿಸಿ ಓಡಿ ಹೋಗಿದ್ದಾನೆ. ಮರಳು ಸಮೇತ ಪಿಕಪ್ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ


