14 ವರ್ಷಗಳ ಕಾನೂನು ಹೋರಾಟ: ಪಂಕ್ಚರ್ ಆದ BMW ಕಾರಿಗೆ 70 ಲಕ್ಷ ಇನ್ಶೂರೆನ್ಸ್ ಪಡೆದ ಮಾಲೀಕ

ಮುಂಬೈ: ಟೈರ್ ಪಂಕ್ಚರ್ ಆದ ಬಿಎಂಡಬ್ಲ್ಯೂ (BMW) ಕಾರ್‌ನ ವಿಮೆಗಾಗಿ 14 ವರ್ಷಗಳ ಕಾನೂನು ಹೋರಾಟದಲ್ಲಿ ವ್ಯಕ್ತಿಗೆ ಜಯ ಸಿಕ್ಕಿದ್ದು, 70 ಲಕ್ಷ ರೂ. ಪರಿಹಾರ ಲಭ್ಯವಾಗಿದೆ.

ಕಾರು ಮಾಲೀಕ ರವಿಕಾಂತ್ ಪಾಟೀಲ್ ಅವರು ಪಂಕ್ಚರ್ ಆದ ತನ್ನ ಕಾರನ್ನು ಹಾಗೇ ಬಿಟ್ಟು ಹೋಗಬಾರದಿತ್ತು ಎಂದು ತಿಳಿಸಿ, ಇನ್ಶೂರೆನ್ಸ್ ಕ್ಲೈಮ್ (Insurance Claim) ನೀಡಲು ನಿರಾಕರಿಸಿತ್ತು. ಇದಕ್ಕೆ ಗ್ರಾಹಕ ಆಯೋಗವು ಕೆಟ್ಟುಹೋದ ವಾಹನವನ್ನು ನಿರ್ಜನವಾಗಿ ಬಿಡುವುದರ ಮೇಲೆ ಪಾಲಿಸಿಯು ಯಾವುದೇ ಸಂಪೂರ್ಣ ನಿಷೇಧವನ್ನು ವಿಧಿಸಿರಲಿಲ್ಲ. ಜೊತೆಗೆ ರಾತ್ರಿ ವೇಳೆ ಹೈವೇನಲ್ಲಿ ವಾಹನ ಕೆಟ್ಟು ನಿಂತಾಗ ಅಥವಾ ಪಂಕ್ಚರ್ ಆದಾಗ ಮಾಲೀಕರು ತಮ್ಮ ವೈಯಕ್ತಿಕ ಸುರಕ್ಷತೆಗೆ ಮೊದಲ ಪ್ರಾಮುಖ್ಯತೆ ನೀಡಬೇಕಾಗುತ್ತದೆ ಹೊರತು ವಾಹನ ಕಾವಲಿಗೆ ಅಲ್ಲ ಎಂದು ಹೇಳಿದೆ.

ಇದೇ ವೇಳೆ, ಮಾಲೀಕರು ಕಾರನ್ನು ಲಾಕ್ ಮಾಡಿ ಸಮಂಜಸವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ 70 ಲಕ್ಷ ರೂ. ಜೊತೆಗೆ ಬಡ್ಡಿ, ಮಾನಸಿಕ ವೇದನೆ ಮತ್ತು ಕಿರುಕುಳಕ್ಕಾಗಿ ಹೆಚ್ಚುವರಿ ಹಣವನ್ನು ಪಾವತಿಸುವಂತೆ ಇನ್ಶೂರೆನ್ಸ್ ಕಂಪನಿಗೆ ಆದೇಶಿಸಿದೆ.

ಬರೋಬ್ಬರಿ 14 ವರ್ಷಗಳ ದೀರ್ಘ ಕಾನೂನು ಹೋರಾಟದ ಬಳಿಕ, ಕಾರಿನ ವಿಮಾ ಮೊತ್ತವಾದ 70 ಲಕ್ಷ ರೂ., ಮಾನಸಿಕ ವೇದನೆಗೆ ಪರಿಹಾರವಾಗಿ 50,000 ರೂ. ಹಾಗೂ ದಾವೆ ವೆಚ್ಚಕ್ಕಾಗಿ 25,000 ರೂ. ಸೇರಿ ಒಟ್ಟು 70.75 ಲಕ್ಷ ರೂ. ಹಾಗೂ ಬಡ್ತಿಯನ್ನು ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

2012ರ ಮಾರ್ಚ್ 8ರಂದು ಕಾರ್ ಮಾಲೀಕ ರವಿಕಾಂತ್ ಪಾಟೀಲ್ ಎನ್ನುವವರು ಮಹಾರಾಷ್ಟçದ ಧುಲ್ಖೇಡ್‌ನ ಹೆದ್ದಾರಿಯಲ್ಲಿ ರಾತ್ರಿ ತೆರಳುವಾಗ ಕಾರ್ ಪಂಕ್ಚರ್ ಆಗಿತ್ತು. ಸಮೀಪ ಮೆಕ್ಯಾನಿಕ್ ಸಿಗದ ಕಾರಣ ರಸ್ತೆಬದಿಯ ಡಾಬಾ ಬಳಿ ನಿಲ್ಲಿಸಿ ಕಾರ್ ಲಾಕ್ ಮಾಡಿ ಬೆಳಗ್ಗೆ ಬಂದು ಪಂಕ್ಚರ್ ಹಾಕಿಸೋಣ ಅಂತ ಬೇರೊಂದು ಕಾರ್‌ನಲ್ಲಿ ಮನೆಗೆ ಹೋಗಿದ್ದರು. ಬೆಳಗ್ಗೆ ಸ್ಥಳಕ್ಕೆ ಬಂದಾಗ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಇದನ್ನು ಪ್ರಶ್ನಿಸಿ ಗ್ರಾಹಕರ ಆಯೋಗಕ್ಕೆ ರವಿಕಾಂತ್ ದೂರು ಕೊಟ್ಟಿದ್ದರು

Star Of Kudla

Learn More →

Leave a Reply

Your email address will not be published. Required fields are marked *