ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಖಂಡಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಪುತ್ತೂರು: ಕೇಂದ್ರ ಚುನಾವಣಾ ಆಯೋಗದ ಕ್ರಮ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಖಂಡಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿಕಟ್ಟೆ ಬಳಿ ಪ್ರತಿಭಟನೆ ನಡೆಯಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ ಉಳಿಸಿ, ದೇಶ ಉಳಿಸಿ ಎಂಬ ಘೋಷಣೆಯೊಂದಿಗೆ ಜ್ಞಾನೇಶ್ ಕುಮಾರ್ ಅವರ ಭಾವಚಿತ್ರಕ್ಕೆ ಕೆಂಪು ಮಾರ್ಕ್ ಮಾಡಿ, ಚಪ್ಪಲಿಯಿಂದ ಹೊಡೆದು, ಪ್ಲೆಕ್ಸ್‍ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
ಕಾಂಗ್ರೆಸ್ ನಾಯಕರು ಹಾಗೂ ಇಂಡಿಯಾ ಮೈತ್ರಿಕೂಟದ ಮುಖಂಡರು ದೆಹಲಿಯ ಜಂತರ್ ಮಂತರ್‍ಗೆ ಶಾಂತಿಯುತವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಅವರನ್ನು ತಡೆದು ಪೊಲೀಸ್ ಬಲಪ್ರಯೋಗ ಮಾಡಿರುವುದು ಖಂಡನೀಯ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಜ್ಞಾನೇಶ್ ಕುಮಾರ್ ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡಿದ್ದಾರೆ. ಅವರು ಬಿಜೆಪಿ ಪಕ್ಷಕ್ಕೆ ಬೆಂಬಲವಾಗಿ ನಿಂತು ಚುನಾವಣಾ ತಂತ್ರಗಾರಿಕೆಯಲ್ಲಿ ಮೋಸ ಮಾಡುತ್ತಿದ್ದಾರೆ. ಇವರನ್ನು ಜ್ಞಾನೇಶ್ ಅಲ್ಲ ಅಜ್ಞಾನೇಶ್ ಎಂದು ಕರೆಬೇಕಾಗಿದೆ. ಯಾಕೆಂದರೆ ಇವರಿಗೆ ಜ್ಞಾನ ಇಲ್ಲ. ಅವರಿಗೆ ಬುದ್ದಿ ಇರುತ್ತಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಇವತ್ತು ಚುನಾವಣಾಧಿಕಾರಿಯಿಂದ ಈ ದೇಶದಲ್ಲಿ ಪಕ್ಷವನ್ನು ಗೆಲ್ಲಿಸುವುದು ದುರಂತ. ಇಂತಹ ದುಷ್ಟ ಚುನಾವಣಾಧಿಕಾರಿಯನ್ನು ವಜಾ ಮಾಡುವುದು ಮಾತ್ರವಲ್ಲ. ಗಲ್ಲು ಶಿಕ್ಷೆ ಕೊಡಬೇಕು. ಈ ಪಾಪಿ ಮಾಡಿದ ಕರ್ಮದಿಂದ ದೇಶ ನರಳುತ್ತಿದೆ. ಇವರ ತಂತ್ರಗಾರಿಕೆಯನ್ನು ಜೊತೆಗಿದ್ದ ಚುನಾವನಾಧಿಕಾರಿ ಒಪ್ಪಿಲ್ಲ ಎಂದುಕ ಅವರ ಮೇಲೂ ಒತ್ತಡ ಹಾಕಿದ್ದಾರೆ. ಚುನಾವಣೆ ಯಾವಾಗಲು ಪಾರದರ್ಶಕವಾಗಿರಬೇಕು. ಇವತ್ತು ನಾವು ಇಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ಮುಂದೆ ಪ್ರತಿ ಹಳ್ಳಿ ಹಳ್ಳಿಯಲ್ಲೂ ದೊಡ್ಡ ಹೋರಾಟ ಮಾಡಲಿದ್ದೇವೆ. ಈ ಚುನಾವಣಾಧಿಕಾರಿಯನ್ನು ವಜಾ ಗೊಳಿಸಿದರೆ ಇದರ ಹಿಂದಿರುವ ಅವರ ಪಕ್ಷದ ಅಧಿಕಾರವು ಹೊಗುತ್ತಿದೆ ಎಂದವರು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಉತ್ತರ ನೀಡಬೇಕು ಎಂದು ಆಗ್ರಹಿಸಿದ ಅವರು ಈ ಪ್ರತಿಭಟನೆ ಸಾಂಕೇತಿಕ ಮುಂದೆ ಗ್ರಾಮ ಗ್ರಾಮಗಳಲ್ಲಿ ಪ್ರತಿಭಟನೆ ಸ್ವರೂಪ ಹೆಚ್ಚಲಿದೆ ಎಂದರು. ಪ್ರತಿಭಟನೆಗೂ ಮುನ್ನ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿ ಡಿಸೋಜ,
ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೂನ್ ಸ್ವಿಕ್ವೇರಾ, ರೋಶನ್ ರೈ ಬನ್ನೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ,
ದಾಮೋದರ್ ಭಂಡಾರ್ಕರ್, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಪಾರೂಕ್ ಪೆರ್ನೆ, ಗಿರೀಶ್, ವಲೇರಿಯನ್ ಡಯಾಸ್, ಸುಪ್ರಿತ್ ಕಣ್ಣರಾಯ, ಬಾತೀಶ್ ಸಾಲ್ಮರ, ಗಂಗಾಧರ್ ಶೆಟ್ಟಿ ಎಲಿಕ, ಅಶ್ರಫ್ ಸಾಲ್ಮರ, ಕೆ.ಕೆ.ಇಬ್ರಾಹಿಂ ಹಾಜಿ, ಅಬ್ದುಲ್ ರಹಿಮಾನ್ ಅಜಾದ್, ಅಶೋಕ್ ಪಾಯಿಸ್ ಮತ್ತಿತರರು ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *