ಶಿಕಾರಿಗೆ ತೆರಳಿದ್ದಾಗ ಮಿಸ್‌ಫೈರ್: ಯುವಕ ಸಾವು, ಮೂವರ ಬಂಧನ, ಮೂವರು ನಾಪತ್ತೆ

ಚಿಕ್ಕಮಗಳೂರು: ರಾತ್ರಿ ವೇಳೆ ಶಿಕಾರಿಗೆ (Hunting) ತೆರಳಿದ್ದಾಗ ಮಿಸ್‌ಫೈರ್ ಆಗಿ ಯುವಕ ಮೃತಪಟ್ಟಿರುವ ಘಟನೆ ಕೊಪ್ಪ (Koppa) ತಾಲೂಕಿನ ಕಾಡಂಚಿನ ಕಡೇಮನೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚೇತನ್ ಗುಂಡೇಟಿಗೆ ಬಲಿಯಾದ ಯುವಕ. ಸೆ.30ರ ರಾತ್ರಿ ಏಳು ಮಂದಿ ಸ್ನೇಹಿತರು ಅರಣ್ಯಕ್ಕೆ ಬೇಟೆಗೆ ತೆರಳಿದ್ದರು. ಈ ವೇಳೆ ಪ್ರಾಣಿಯ ಮೇಲೆ ಗುಂಡು ಹಾರಿಸುವಾಗ ಮಿಸ್‌ಫೈರ್ ಆಗಿ ಜೊತೆಯಲ್ಲಿದ್ದ ಚೇತನ್‌ಗೆ ಗುಂಡು ತಗುಲಿದೆ.

ತಕ್ಷಣ ಸ್ನೇಹಿತರು ಚೇತನ್‌ನನ್ನು ಜಯಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಹೊಟ್ಟೆ ಭಾಗಕ್ಕೆ ಗುಂಡು ತಗುಲಿದ್ದರಿಂದ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ.

ಚೇತನ್‌ನನ್ನು ಆಸ್ಪತ್ರೆಗೆ ಕರೆತಂದ ಮೂವರನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗುಂಡು ಹಾರಿಸಿದರೆನ್ನಲಾದ ಉಳಿದ ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ನಡುವೆ, ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಜಯಪುರ ಆಸ್ಪತ್ರೆ ಮುಂಭಾಗ ಮುಗಿಲು ಮುಟ್ಟಿತ್ತು.

ಗುಂಡೇಟು ಉದ್ದೇಶಪೂರ್ವಕವಾಗಿ ನಡೆದಿದೆಯೇ ಅಥವಾ ಮಿಸ್‌ಫೈರ್‌ನಿಂದ ಸಂಭವಿಸಿದೆಯೇ ಎಂಬುದು ತನಿಖೆಯಿಂದ ಸ್ಪಷ್ಟವಾಗಲಿದೆ.

Star Of Kudla

Learn More →

Leave a Reply

Your email address will not be published. Required fields are marked *