ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧ ತಯಾರಿಕೆ ಹಾಗೂ ಮಾರಾಟ ಜಾಲದ ಪ್ರಮುಖ ಸೂತ್ರಧಾರ (ಕಿಂಗ್ಪಿನ್) ಪ್ರಶಾಂತ್ ರಂಜನ್ ಬಾಬು ಎಂಬಾತನನ್ನು ಕೊನೆಗೂ ಪೋಲಿಸರು ಬಂದಿಸಿದ್ದಾರೆ. ದುಬೈನ ಶಾರ್ಜಾದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಂತೆಯೇ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB) ಇಂದು ಮುಂಜಾನೆ ಆತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ ಈಗಾಗಲೇ ‘ಲುಕ್ ಔಟ್ ನೋಟಿಸ್’ (Lookout Notice) ಜಾರಿಯಲ್ಲಿದ್ದ ಕಾರಣ, ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಇಮಿಗ್ರೇಷನ್ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಸೆರೆಹಿಡಿದಿದ್ದಾರೆ.
ಅರೈವಲ್ ಗೇಟ್ನಲ್ಲಿ ಏರ್ಪೋರ್ಟ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಎಸಿಪಿ ಅಂಜನ್ ಕುಮಾರ್ ಟೀಮ್ ವಶಕ್ಕೆ ಪ್ರಶಾಂತನನ್ನು ಏಪೋರ್ಟ್ ಅಧಿಕಾರಿಗಳು ನೀಡಿದರು. ಸದ್ಯ ಪ್ರಸಾದನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಲಿದ್ದಾರೆ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಈ ನಕಲಿ ಔಷಧ ತಯಾರಿಕಾ ಜಾಲದ ಬೆನ್ನತ್ತಿದ್ದ ಪೊಲೀಸರಿಗೆ, ಪ್ರಶಾಂತ್ ರಂಜನ್ ಬಾಬು ಮುಖ್ಯ ಸೂತ್ರಧಾರ ಎಂಬುದು ತಿಳಿದುಬಂದಿತ್ತು. ಈತ ವಿದೇಶಕ್ಕೆ ಪರಾರಿಯಾಗಿದ್ದರಿಂದ ಆತನ ಬಂಧನಕ್ಕಾಗಿ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ಇದೀಗ ಪ್ರಮುಖ ಆರೋಪಿಯನ್ನೇ ಅರೆಸ್ಟ್ ಮಾಡಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆಯಿದ್ದು, ತನಿಖಾಧಿಕಾರಿಗಳು ಆತನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.


