ಪುತ್ತೂರು: ಪ್ರಜಾ ಆಂದೋಲನ ವಿಶೇಷ ಶಿಬಿರ

ದಿನಾಂಕ :5/9/2026ರಂದು ಶನಿವಾರ ಬೆಳಿಗ್ಗೆ 10ಗಂಟೆಯಿಂದ 4.30ರವರೆಗೆ ಪುತ್ತೂರು ತಾಲ್ಲೂಕು ಅರೋಗ್ಯ ಅಧಿಕಾರಿಗಳ ಕಚೇರಿ,ಪುತ್ತೂರು ಸರಕಾರಿ ಆಸ್ಪತ್ರೆ ದಕ್ಷಿಣ ಕನ್ನಡ ಜಿಲ್ಲಾ ಅರೋಗ್ಯ ಅಧಿಕಾರಿ ಗಳ ಮತ್ತು ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮ ವಿಭಾಗ ಪುತ್ತೂರು ತಾಲ್ಲೂಕು ವಿವಿದೋದ್ದೇಶ ಪುನರ್ ವಸತಿ ಕಾರ್ಯ ಕರ್ತರ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು,ಪುತ್ತೂರು ಸರಕಾರಿ ಆಸ್ಪತ್ರೆ, ಯಲ್ಲಿ ಪ್ರಜಾ ಆಂದೋಲನ ಪ್ರಯುಕ್ತ ವಿಕಲ ಚೇತನರ ವಿಶೇಷ ಪ್ರಮಾಣ ಪತ್ರ ಶಿಬಿರ ಹಾಗೂ ಮಾನಸಿಕ /ಬೌದ್ಧಿಕ ವಿಕಲ ಚೇತನರ ಪ್ರಮಾಣ ಪತ್ರ ಶಿಬಿರ ಪುತ್ತೂರು ಸರಕಾರಿ ಆಸ್ಪತ್ರೆ ಯಲ್ಲಿ ಆಡಳಿತ ವ್ಯೆದ್ಯಾಧಿಕಾರಿ ಗಳಾದ ಡಾಕ್ಟರ್ ಯದು ರಾಜ್ ಡಿ. ಕೆ ರವರ ಅಧ್ಯಕ್ಷ ತೆ ಯಲ್ಲಿ ನಡೆಯಿತು.

ವಿಶೇಷ ವಿಕಲ ಚೇತನರ ಪ್ರಮಾಣ ಪತ್ರ ಶಿಬಿರ ದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ ಯ ಎಲುಬು ಕೀಲು ತಜ್ಞ ರಾದ ಡಾಕ್ಟರ್ ಅಜಯ್ ಎಮ್. ಬಿ, ಮಕ್ಕಳ ತಜ್ಞ ರಾದ ಡಾಕ್ಟರ್ ಪ್ರಶಾಂತ್ ಎನ್, ಕಿವಿ ಮೂಗು ಗಂಟಲು ತಜ್ಞ ರಾದ ಡಾಕ್ಟರ್ ಪುಷ್ಪ ಲತಾ ಎನ್, ನೇತ್ರ ತಜ್ಞ ರಾದ ಡಾಕ್ಟರ್ ಅನಿತಾ ಕಿರಣ್, ಪುತ್ತೂರು ಸರಕಾರಿ ಆಸ್ಪತ್ರೆ ಯ ಸರ್ಜನ್ ಡಾಕ್ಟರ್ ಯೋಗೀಶ್ ಪುತ್ತೂರು ಸರಕಾರಿ ಆಸ್ಪತ್ರೆ ಯ ಹಿರಿಯ ತಜ್ಞ ರಾದ ಫಿಸಿಷಿಯನ್ ಡಾಕ್ಟರ್ ಯದು ರಾಜ್ ಡಿ. ಕೆ, ದಕ್ಷಿಣ ಕನ್ನಡ ಮಾನಸಿಕ ಆರೋಗ್ಯ ವಿಭಾಗ ಕಾರ್ಯಕ್ರಮದ ಮಾನಸಿಕ ತಜ್ಞ ರಾದ ಡಾಕ್ಟರ್ ನಿಯೋಲ ಮತ್ತು ಮಾನಸಿಕ ಆರೋಗ್ಯ ವಿಭಾಗದ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ತಜ್ಞ ವ್ಯೆದಾಧಿಕಾರಿ ಗಳ ತಂಡ ಸಿಬ್ಬಂದಿಗಳು ಮತ್ತು ಪುತ್ತೂರು ಸರಕಾರಿ ಆಸ್ಪತ್ರೆಯ ನರ್ಸ್ ಸಿಬ್ಬಂದಿಗಳು ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯಕರ್ತ ರಾದ ನವೀನ್ ಕುಮಾರ್ ಹಾಗೂ ಪುತ್ತೂರು ತಾಲ್ಲೂಕು ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ವಿಶೇಷ ವಿಕಲ ಚೇತನರ ಪ್ರಮಾಣ ಪತ್ರ ಶಿಬಿರ ಯಶಸ್ವಿ ಯಾಗಲು ಉತ್ತಮ ಸಹಕಾರ ನೀಡಿದ್ದರು.

Star Of Kudla

Learn More →

Leave a Reply

Your email address will not be published. Required fields are marked *