ರೌಡಿಗಳನ್ನು ಬಿಟ್ಟು ನನ್ನ ಕೊಲೆಗೆ ಯತ್ನ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಹಕೀಂ ಕೂರ್ನಡ್ಕ ಗಂಭೀರ ಆರೋಪ

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ನಡುವಿನ ಜಟಾಪಟಿ ಮತ್ತಷ್ಟು ತೀವ್ರಗೊಂಡಿದ್ದು, ಶಾಸಕರು ರೌಡಿಗಳನ್ನು ಬಿಟ್ಟು ತಮ್ಮ ಕೊಲೆಗೆ ಯತ್ನಿಸಿದ್ದಾರೆ ಎಂದು ಹಕೀಂ ಗಂಭೀರ ಆರೋಪ ಮಾಡಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಶೋಕ್ ರೈ ಅವರ ನಡೆ ಹಾಗೂ ಪಕ್ಷವಿರೋಧಿ ಚಟುವಟಿಕೆಗಳ ವಿರುದ್ಧ ಸರಣಿ ಆರೋಪಗಳ ಸುರಿಮಳೆಗರೆದರು.
ಪುತ್ತೂರು ಶಾಸಕರು ಜಲೀಲ್ ಕರೋಪಾಡಿ ಕೊಲೆ ಆರೋಪಿ, ಬೆಳ್ಳಾರೆಯ ಮಸೂದ್ ಕೊಲೆ ಆರೋಪಿಗಳನ್ನು ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಇಂಥವರನ್ನು ಇಟ್ಟುಕೊಂಡು ಕಾಂಗ್ರೇಸ್ ಪಕ್ಷ ಸಂಘಟಿಸಲು ಸಾಧ್ಯವಿದೆಯೇ. ಇದನ್ನು ನಾನು ಪ್ರಶ್ನಿಸಿದಕ್ಕೆ ನನ್ನ ವಿರುದ್ಧ ಶಾಸಕರು ತಮ್ಮ ಗೂಂಡಾಗಳನ್ನು ಬಿಟ್ಟು ಬೆದರಿಸುವ ಪ್ರಯತ್ನ ಮಾಡಿದರು. ಆದರೆ ಇಂತಹ ಬೆದರಿಕೆಗಳಿಗೆ ಬಗ್ಗುವ ವ್ಯಕ್ತಿ ನಾನಲ್ಲ ಎಂದ ಅವರು ನನ್ನನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಶ್ಯಕ್ಷ ಕೃಷ್ಣಪ್ರಸಾದ್ ಆಳ್ವ ಕಾಂಗ್ರೆಸ್ ಕಾರ್ಯಕರ್ತನೇ ಅಲ್ಲ ಎಂದಿದ್ದಾರೆ. ನಾನು ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅಶೋಕ್ ರೈ ಪರ ಮತಯಾಚನೆ ಮಾಡಿದವನು.

ನಾನು ಕೃಷ್ಣಪ್ರಸಾದ್ ಆಳ್ವರ ಕಾಂಗ್ರೇಸ್ ಅಲ್ಲ, ನಾನು ರಾಹುಲ್ ಗಾಂಧಿಯ ನ್ಯಾಷನಲ್ ಕಾಂಗ್ರೆಸ್ ನ ಕಾರ್ಯಕರ್ತ. ಕೃಷ್ಣಪ್ರಸಾದ್ ಆಳ್ವರ ಅಕ್ಕನ ಮಗ ಬಿಜೆಪಿಯ ಬೆಳ್ತಙಗಡಿ ಶಾಸಕ ಹರೀಶ್ ಪೂಂಜಾ. ನಾನು ಕಳೆದ ಚುನಾವಣೆಯಲ್ಲಿ ಅಶೋಕ್ ರೈ ಪ್ರಚಾರಕ್ಕೆ ಹತ್ತು ದಿನ ನನ್ನ ಕಾರನ್ನು ನೀಡಿದ್ಧೇನೆ. ಪಶು ವೈದ್ಯಕೀಯ ಕಛೇರಿಯಲ್ಲಿ ಚಾಲಕನಾಗಿದ್ದ ಶಶಿ ಎಂಬಾತ ನನ್ನ ಕಾರನ್ನು ಚುನಾವಣೆಗಾಗಿ ಬಳಸಿದ್ದ. ಆ ವಿಚಾರವನ್ನು ಆತ ಕಾಂಗ್ರೆಸ್ ನ ಕೆಲವರಲ್ಲಿ ಹೇಳಿದ ಕಾರಣ ಆತನಿಗೆ ಶಾಸಕರ ಗೂಂಡಾಗಳು ಶಾಸಕರ ಕಛೇರಿಯಲ್ಲೇ ಹಲ್ಲೆ ನಡೆಸಿದ್ದಾರೆ. ಆತನಿಗೆ ಚಾಲಕನಾಗಿ ಕೆಲಸವನ್ನು ನೀಡಿದ್ದ ಶಾಸಕರೇ ಅವನನ್ನು ಕೆಲಸದಿಂದ ತೆಗೆದಿದ್ದಾರೆ. ನಾನು ಕಾಂಗ್ರೇಸ್ ನ ಎಲ್ಲಾ ಪ್ರತಿಭಟನೆಗಳಲ್ಲಿ ಭಾಗಿಯಾದವ. ಆದರೆ ಇಂದು ಶಾಸಕರಾಗಲೀ, ಅವರ ಬೆಂಬಲಿಗರ ಕಾರುಗಳಲ್ಲಿ ಕಾಂಗ್ರೆಸ್ ಪಕ್ಷದ ಒಂದು ಶಾಲು ಇದೆಯೋ ಎಂದು ಅವರು ಪ್ರಶ್ನಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *