ಬೈಂದೂರು ಚಾತುರ್ಮಾಸ್ಯಸಾಂಪ್ರದಾಯಿಕತೆ ಮತ್ತು ಧಾರ್ಮಿಕ ಭಾವನೆಯ ಸಮ್ಮಿಲನ

​ಬೈಂದೂರು: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಾದದೊಂದಿಗೆ ಸಾಮೂಹಿಕ ವರಮಹಾಲಕ್ಷ್ಮಿ ವ್ರತ ಮತ್ತು ರಕ್ಷಾಬಂಧನ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಸುಮಾರು ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಭಾಗೀನ ನೀಡಿ ವರಲಕ್ಷ್ಮಿ ವ್ರತಾಚರಣೆ ಆಚರಿಸಲಾಯಿತು.

​ಇಂದಿನ ಆಧುನಿಕ ಯುಗದಲ್ಲಿ ಹಾಗೂ ಜೆನ್-ಝಿ (GenZ) ಯುವಜನರು ನಮ್ಮ ಸಂಪ್ರದಾಯಗಳನ್ನು ಮರೆಯುತ್ತಿರುವ ಈ ಕಾಲಘಟ್ಟದಲ್ಲಿ, ಬೈಂದೂರು ಚಾತುರ್ಮಾಸ್ಯವು ಪ್ರತಿದಿನವೂ ಹಿಂದೂ ಸಂಸ್ಕಾರಗಳ ಜೀವಂತ ಪಾಠಶಾಲೆಯಾಗಿ ರೂಪುಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಧಾರ್ಮಿಕ ವೇದಿಕೆಯಲ್ಲಿ ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಭಾಗಿನ ನೀಡಿ ಸಾಮೂಹಿಕವಾಗಿ ವರಮಹಾಲಕ್ಷ್ಮಿ ವ್ರತ ಆಚರಿಸಲಾಯಿತು. ಇದು ಜನರ ಮನಸ್ಸಿನಲ್ಲಿ ಭಕ್ತಿ ಭಾವನೆಯನ್ನು ಇಮ್ಮಡಿಗೊಳಿಸುವುದರ ಜೊತೆಗೆ ನಮ್ಮ ಸನಾತನ ಸಂಸ್ಕೃತಿಯ ಬೇರನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಶಾಸಕರಾದ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನೆಡೆಯುತ್ತಿರುವ ಚಾತುರ್ಮಾಸ್ಯ ಅತ್ಯಂತ ಪ್ರಸಿದ್ದಿ ಪಡೆಯುತ್ತಿದ್ದೂ ರಾಜ್ಯದ ಮೂಲೆ ಮೂಲೆಯಿಂದ ಗಣ್ಯತಿಗಣ್ಯರು ಮತ್ತು ಹೊರ ಜಿಲ್ಲೆಯಿಂದಲೂ ಭಕ್ತಾದಿಗಳು ಬರುತ್ತಿರುವುದರಿಂದ ಧಾರ್ಮಿಕ ಹಬ್ಬವಾಗಿ ಹಿಂದೂಗಳು ಸಂಭ್ರಮಿಸುತ್ತಿದ್ದಾರೆ.

ಈ ಸಂಧರ್ಭದಲ್ಲಿ ಬೈಂದೂರು ಚಾತುರ್ಮಾಸ್ಯ ಅಧ್ಯಕ್ಷರಾದ ಗುರುರಾಜ್ ಗಂಟಿಹೊಳೆ, ಉಪಾಧ್ಯಕ್ಷರಾದ ಎಸ್ ರಾಜು ಪೂಜಾರಿ,ಸಂಚಾಲಕರಾದ ಶಿವರಾಜ್ ಪೂಜಾರಿ, ಮಹಿಳಾ ಅಧ್ಯಕ್ಷರಾದ ಜ್ಯೋತಿ ಪೂಜಾರಿ, ಅನಿತಾ ಮರವಂತೆ, ಶ್ಯಾಮಲಾ ಕುಂದರ್,ರಮೇಶ್ ಪೂಜಾರಿ, ನರಸಿಂಹ ಪೂಜಾರಿ ಮತ್ತು ಇತರ ಧಾರ್ಮಿಕ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *