ಪುತ್ತೂರಿನಲ್ಲಿ ಇಂದು ಸ್ವಯಂಪ್ರೇರಿತ ಬಂದ್‌..!! ಬಂದ್‌ಗೆ ಅರುಣ್ ಕುಮಾರ್ ಪುತ್ತಿಲ ಬೆಂಬಲ

ಪುತ್ತೂರು: ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವನ್ನು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಇಂದು (ಆ.25) ಪುತ್ತೂರು ನಗರದಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದೆ. ಬಂದ್‌ಗೆ ಅರುಣ್ ಕುಮಾರ್ ಪುತ್ತಿಲ ಬೆಂಬಲ ವ್ಯಕ್ತಪಡಿಸಿದ್ದಾರೆ.

ವರ್ತಕರ ಹಿತರಕ್ಷಣೆ ಹಾಗೂ ಪುತ್ತೂರು ನಗರದಲ್ಲಿ ಶಾಂತಿ, ಸಾಮರಸ್ಯ ಕಾಪಾಡುವ ಉದ್ದೇಶದಿಂದ ಬಂದ್‌ಗೆ ನಗರದ ಪ್ರಮುಖ ವ್ಯಾಪಾರಸ್ಥರು ಹಾಗೂ ನಾಗರಿಕರು ಬೆಂಬಲ ನೀಡುವಂತೆ ವೇದಿಕೆ ಮನವಿ ಮಾಡಿದೆ. ದರ್ಬೆ ಘಟನೆಯನ್ನು ಖಂಡಿಸಿ ಆ.25ರಂದು ಪುತ್ತೂರು ನಗರದಲ್ಲಿ ಸ್ವಯಂಪ್ರೇರಿತವಾಗಿ ಬಂದ್ ಆಚರಿಸುವಂತೆ ಕರೆ ನೀಡಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *