
ದಕ್ಷಿಣ ಕನ್ನಡ ಜೆಡಿಎಸ್ ಘಟಕಕ್ಕೆ ಹೊಸ ಚೈತನ್ಯ: ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ ಮಹತ್ವದ ನೇಮಕಾತಿ ಘೋಷಣೆ
ಶಶಿರಾಜ ಶೆಟ್ಟಿ ಕೊಳಂಬೆ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಜಪ್ಪು ಮಹಾ ಪ್ರಧಾನ ಕಾರ್ಯದರ್ಶಿ

ಬೆಂಗಳೂರು, ಏಪ್ರಿಲ್ 18: ದಕ್ಷಿಣ ಕನ್ನಡ ಜಿಲ್ಲಾ ಜನತಾದಳ (ಜಾತ್ಯಾತೀತ) ಘಟಕದ ಸಂಘಟನಾತ್ಮಕ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಪಕ್ಷದ ರಾಜ್ಯ ನಾಯಕತ್ವ ಮಹತ್ವದ ನೇಮಕಾತಿಗಳನ್ನು ಪ್ರಕಟಿಸಿದೆ.

ಜಿಲ್ಲಾ ಘಟಕದ ನೂತನ ಕಾರ್ಯಧ್ಯಕ್ಷರಾಗಿ ಶಶಿರಾಜ ಶೆಟ್ಟಿ ಕೊಳಂಬೆ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಯೋಗಿಶ್ ಶೆಟ್ಟಿ ಜಪ್ಪು ಅವರನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ ಜಿಲ್ಲಾ ಸಮಿತಿಯ ಸಂಪೂರ್ಣ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.
ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ಅವರ ಶಿಫಾರಸಿನಂತೆ ಈ ನೇಮಕಾತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ H. D. Kumaraswamy ಅವರು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಘೋಷಿಸಿದರು.

ಜಿಲ್ಲಾ ಸಮಿತಿಯ ಪ್ರಮುಖರು ಹೀಗಿದ್ದಾರೆ:
• ಅಧ್ಯಕ್ಷರು: ಜಾಕೆ ಮಾಧವ ಗೌಡ ಪಂಜಿತ್ತಾಡಿ
• ಕಾರ್ಯಧ್ಯಕ್ಷರು: ಶಶಿರಾಜ ಶೆಟ್ಟಿ ಕೊಳಂಬೆ
• ಉಪಾಧ್ಯಕ್ಷರು: ಅಜೀಜ್ ಮಲಾರ್ (ಉಳ್ಳಾಲ), ದಯಾಕರ್ ಆಳ್ವ (ಸುಳ್ಯ), ಸಿ.ಪಿ. ಸೈಮನ್ (ಕಡಬ), ಅಜೀಜ್ ಕುದ್ರೋಳಿ (ಮಂಗಳೂರು)
• ಮಹಾ ಪ್ರಧಾನ ಕಾರ್ಯದರ್ಶಿ: ಯೋಗಿಶ್ ಶೆಟ್ಟಿ ಜಪ್ಪು
• ಕಾರ್ಯದರ್ಶಿಗಳು: ಮೋಹನ್ದಾಸ್ ಶೆಟ್ಟಿ, ಪುತ್ತು ಮೋನು ಹುಸೇನ್ (ಮಂಗಳೂರು), ಪ್ರಿಯಾ ಸಾಲಿಯಾನ್ (ಪುತ್ತೂರು), ಮುನೀರ್ ಮುಕ್ಕಚೇರಿ
• ಖಜಾಂಚಿ: ಗಂಗಾಧರ ಉಳ್ಳಾಲ
• ಸಂಘಟನಾ ಕಾರ್ಯದರ್ಶಿಗಳು: ಧರ್ಮರಾಜ ಗೌಡ (ಕೊಕ್ಕಡ), ಎಐ.ಸಿ. ಕೈಲಾಶ್ ಕೆದಂಬಾಡಿ, ಸುಮತಿ ಹೆಗ್ಡೆ (ಮಂಗಳೂರು), ಉಸ್ಮಾನಕ್ಕ (ಉಳ್ಳಾಲ), ಸುಮಿತ್ ಸುವರ್ಣ, ವೆಂಕಟೇಶ್ ತಡಂಬೈಲ್
ಈ ನೇಮಕಾತಿ ಪಟ್ಟಿಯನ್ನು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ವಿ. ನಾಡಗೌಡ ಮತ್ತು ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ ಅವರು ಜಿಲ್ಲಾ ಪ್ರಮುಖರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಂ.ಬಿ. ಸದಾಶಿವ, ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗೊಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಜಿಲ್ಲಾ ವಿದ್ಯಾರ್ಥಿ ಜನತಾದಳ ಅಧ್ಯಕ್ಷ ನಿಹಾಲ್ ಎಸ್. ಕೋಡ್ತುಗುಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆ, ಸಂಘಟನೆಗೆ ವೇಗ ಮತ್ತು ಕಾರ್ಯಚಟುವಟಿಕೆಗಳಿಗೆ ಹೆಚ್ಚಿನ ಚುರುಕು ನೀಡುವ ಉದ್ದೇಶದಿಂದ ಈ ನೇಮಕಾತಿಗಳನ್ನು ಕೈಗೊಳ್ಳಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ.


