ಅಕ್ರಮ ಪಾಸ್‌ಪೋರ್ಟ್‌: ನಕಲಿ ವರದಿ, ಫೋರ್ಜರಿ ಸಹಿ ಮಾಡಿದ್ದ ವಿಟ್ಲ ಪೊಲೀಸ್ ಸಿಬ್ಬಂದಿ ಸೇವೆಯಿಂದ ಅಮಾನತು.

ಸುಳ್ಳು ದಾಖಲೆ ನೀಡಿ ವ್ಯಕ್ತಿಯೊಬ್ಬರು ಅಕ್ರಮ ಪಾಸ್‌ಪೋರ್ಟ್‌ ಪಡೆಯಲು ನೆರವಾಗಿದ್ದ ವಿಟ್ಲ ಪೊಲೀಸ್ ಠಾಣೆ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ನಕಲಿ ವರದಿ ಮತ್ತು ಅಧಿಕಾರಿಯ ಸಹಿ ಪೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯ ಪ್ರದೀಪ್ ಬಂಧಿತ ಪೊಲೀಸ್ ಸಿಬ್ಬಂದಿ. ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ವಿಚಾರಣಾಧೀನ ಖೈದಿಯಾಗಿದ್ದ ಶಕ್ತಿದಾಸ್ ಎಂಬಾತ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು ಕಳೆದ ಫೆಬ್ರವರಿಯಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಳಾಸ ತಾಳೆಯಾಗದ ಕಾರಣ ಅರ್ಜಿಯನ್ನು ಬೀಟ್ ಪೊಲೀಸ್ ಸಿಬ್ಬಂದಿ ಸಾಬು ಮಿರ್ಜಿ ತಿರಸ್ಕರಿಸಿದ್ದರು.

ಜೂನ್‌ನಲ್ಲಿ ಶಕ್ತಿದಾಸ್ ಮರು ಅರ್ಜಿ ಸಲ್ಲಿಸಿದ್ದರು. ಬೀಟ್ ಸಿಬ್ಬಂದಿ ಸಾಬು ಮಿರ್ಜಿಗೆ ತಿಳಿಸದೇ ಅವರ ಹೆಸರಲ್ಲೇ ಸಿಬ್ಬಂದಿ ಪ್ರದೀಪ್‌ ವರದಿ ತಯಾರಿಸಿದ್ದರು. ಮೇಲಧಿಕಾರಿಗಳಿಂದ ಶಿಫಾರಸು ಮಾಡಿಸಿದ ಬಳಿಕ ಪರಿಶೀಲನಾ ದಾಖಲೆಗಳನ್ನು ನಾಶ ಮಾಡಿದ್ದರು.

2025ರ ಡಿಸೆಂಬರ್ 12ರಂದು ದಾಖಲೆಗಳನ್ನು ಪರಿಶೀಲಿಸುವ ವೇಳೆ ಈ ವಿಷಯ ಬಹಿರಂಗವಾಯಿತು. ಸಿಬ್ಬಂದಿ ಸಾಬು ಮಿರ್ಜಿ ನೀಡಿದ ದೂರಿನನ್ವಯ ಪ್ರದೀಪ್ ಹಾಗೂ ಶಕ್ತಿದಾಸ್‌ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?