ಕುಂಪಲ ಬೈಪಾಸ್ ಬಳಿ ಮಧ್ಯವಯಸ್ಕನ ರೋಚಕ ಸಾವು

ಕುಂಪಲ : ಇಲ್ಲಿನ ಬೈಪಾಸ್ ಸಮೀಪ ಮಧ್ಯವಯಸ್ಕನ ಮೃತದೇಹ ರಕ್ತದ ಮಡುವಿನಲ್ಲಿ ಮನೆ ಅಂಗಳದಲ್ಲಿ ಪತ್ತೆಯಾಗಿದೆ. ಸ್ಥಳೀಯ ಚಿಕನ್ ಅಂಗಡಿ ಬದಿಯಲ್ಲಿ ಗಾಯವಾಗಿ ಕಣ್ಣೊಂದು ಹೊರಬಿದ್ದು ಮನೆ ಅಂಗಳಕ್ಕೆ ಓಡಿ ಅಲ್ಲೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಎಂಬವರ ಮೃತದೇಹ ಪತ್ತೆಯಾಗಿದೆ. ಬೆಳಿಗ್ಗೆ ಸುಮಾರು 3 ಗಂಟ ವೇಳೆ ಈತನನ್ನು ಸ್ಥಳದಲ್ಲಿ ಹಲವರು ನೋಡಿದ್ದರು. ಬಳಿಕ ಮೃತದೇಹ ರಕ್ತದ ಮಡುವಿನಲ್ಲಿ ಕಂಡುಬಂದಿದೆ. ಉಳ್ಳಾಲ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು ತನಿಖೆ ಆರಂಭಿಸಿದ್ದಾರೆ. ಸ್ಥಳೀಯವಾಗಿ ನಾಯಿಯು ರಕ್ತದ ಮಡುವಿನಲ್ಲಿ ಇರುವುದು ಕಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಫಾರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

Star Of Kudla

Learn More →

Leave a Reply

Your email address will not be published. Required fields are marked *