ಡಿಎನ್ಎ ವರದಿ ಬರಲಿ ಮದುವೆಗೆ ಪ್ರಯತ್ನಿಸುವ ಎಂದವರೂ ಇಂದು ನಾಪತ್ತೆ..!

ಪುತ್ತೂರು:ಯುವತಿಗೆ ವಂಚಿಸಿ ಮಗು ಭಾಗ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನೇ ಮಗುವಿನ ಅಪ್ಪ ಎಂದು ಡಿಎನ್ಎ ವರದಿಯಲ್ಲಿ ಸಾಬೀತಾಗಿದೆ. ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಯತ್ನಿಸಿದ್ದ ಹೋರಾಟಗಾರರು ಇಂದು ಮರೆಯಾಗಿದ್ದಾರೆ. ಡಿಎನ್ಎ ಟೆಸ್ಟ್ ವರದಿ ಬರಲಿ ಮದುವೆಗೆ ಪ್ರಯತ್ನಿಸುವ ಎಂದವರೂ ಇಂದು ನಾಪತ್ತೆಯಾಗಿದ್ದಾರೆ. ಹೋರಾಟಗಾರರ ಈ ನಡೆ ಸಂತ್ರಸ್ತೆ ಯುವತಿಯ ಪೋಷಕರ ಆಕ್ರೋಶಕ್ಕೂ ಕಾರಣವಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ ರಾವ್ ಪುತ್ರ ಶ್ರೀಕೃಷ್ಣ. ಜೆ.ರಾವ್ ಯುವತಿಯೋರ್ವಳಿಗೆ ಮದುವೆಯಾಗುವುದಾಗಿ ವಂಚಿಸಿ ಆಕೆಗೆ ಮಗು ಭಾಗ್ಯ ನೀಡಿದ್ದ. ಈ ವಿಚಾರವಾಗಿ ಹಲವು ತರಹದ ಹೋರಾಟಗಾರರು ಸಂತ್ರಸ್ತೆಯ ಪರವಾಗಿ ಹೋರಾಟ ಮಾಡಿದ್ದರು. ಕೆಲವರು ಸಂತ್ರಸ್ತೆಯ ಮನೆಗೆ ತೆರಳಿ ಆರೋಪಿ ಯುವಕನೊಂದಿಗೆ ಯುವತಿಯ ಮದುವೆ ಮಾಡಿಸುವ ಭರವಸೆಯನ್ನೂ ನೀಡಿದ್ದರು. ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಯುವಕನ ಮನೆ ಮಂದಿಯ ಮನವೊಲಿಸಿ ಮದುವೆ ಮಾಡಿಸಿಕೊಡುವ ಭರವಸೆ ನೀಡಿದ್ದರು. ವಂಚನೆ ಆರೋಪದಲ್ಲಿ ಜೈಲು ಪಾಲಾಗಿದ್ದ ಶ್ರೀಕೃಷ್ಣ‌.ಜೆ.ರಾವ್ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸುವ ಭರವಸೆಯನ್ನೂ ನೀಡಲಾಗಿತ್ತು. ಈ ನಡುವೆ ಮಗುವು ಆರೋಪಿಗೆ ಸೇರಿದ್ದೇ, ಅಲ್ಲವೇ ಎನ್ನುವ ಗೊಂದಲಗಳೂ ಕೆಲವು ಹೋರಾಟಗಾರರಲ್ಲಿ ಮೂಡಿತ್ತು. ಈ ಗೊಂದಲಕ್ಕೂ ಇದೀಗ ಪರಿಹಾರ ದೊರೆತಿದ್ದು, ಶ್ರೀಕೃಷ್ಣನೇ ಮಗುವಿನ ತಂದೆ ಅನ್ನೊದು ಡಿಎನ್ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ ಡಿಎನ್ಎ ಪರೀಕ್ಷೆ ಬಂದ ಬಳಿಕ ಸಂತ್ರಸ್ತೆಯ ಪರವಾಗಿ ನಿಂತವರು ಮೌನವಾಗಿದ್ದಾರೆ ಎನ್ನುವ ಆರೋಪಗಳೂ ಕೇಳಿಬಂದಿವೆ.

ಅಲ್ಲದೆ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಯುವತಿಯ ಪೋಷಕರು ಯುವಕನ ವಿರುದ್ಧ ಪೋಲೀಸ್ ದೂರು ದಾಖಲಿಸಲು ಮೊದಲ ಬಾರಿಗೆ ಮುಂದಾಗಿದ್ದರು. ಆ ಸಮಯದಲ್ಲಿ ದೂರು ಕೊಡದಂತೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಯುವತಿಯ ಪೋಷಕರಲ್ಲಿ ಮನವಿ ಕಾಡಿದ್ದರು. ಯುವಕನ ಭವಿಷ್ಯ ಹಾಳಾಗುತ್ತೆ ಎಂದಿದ್ದರು. ಅಂದು ಶಾಸಕರ ಮಾತು ಕೇಳಿ ದೂರು ನೀಡಲು ಸಮಯ ತೆಗೆದುಕೊಂಡಿದ್ದ ಯುವತಿಯ ಪೋಷಕರು ಇದೀಗ ಶಾಸಕರ ವಿರುದ್ಶವೂ ಅಸಮಾಧಾನ ಹೊರಹಾಕಿದ್ದಾರೆ. ಅಂದು ಶಾಸಕರ ಮಾತು ಕೇಳದೇ ಇರುತ್ತಿದ್ದಲ್ಲಿ, ಕನಿಷ್ಟಪಕ್ಷ ಹಾರ ಬದಲಾಯಿಸಿಕೊಳ್ಳುವ ಪ್ರಕ್ರಿಯೆಯಾದರೂ ಆಗುತ್ತಿತ್ತು. ಈಗ ಮಗುವಿನ ಡಿಎನ್ಎ ಪರೀಕ್ಷೆ ವರದಿ ಬಂದಿದ್ದು, ಇನ್ನಾದರೂ ಶಾಸಕರು ಮುಂದೆ ನಿಂತು ಮದುವೆ ಮಾಡಿಸಬೇಕು ಎನ್ನುವ ಒತ್ತಾಯವನ್ನೂ ಸಂತ್ರಸೆಯ ಕುಟುಂಬ ಮಾಡಲಾರಂಭಿಸಿದೆ.

ಹೆಣ್ಣಿಗೆ ಅನ್ಯಾಯವಾದಾಗ ಎದ್ದು ನಿಲ್ಲುತ್ತಿದ್ದ ಹಿಂದೂಪರ ಸಂಘಟನೆಗಳು ಪುತ್ತೂರಿನ ಈ ಯುವತಿಯ ಪರ ಧ್ವನಿ ಎತ್ತಿಲ್ಲ ಎನ್ನುವ ಆರೋಪವನ್ನೂ ಮೈಮೇಲೆ ಎಳೆದುಕೊಂಡಿದೆ. ದಿನಗಳೆದಂತೆ ಈ ಪ್ರಕರಣ ಜಟಿಲಗೊಳ್ಳುತ್ತಿದ್ದು, ಮುಕ್ತಾಯ ಹೇಗಾಗಲಿದರ ಎನ್ನುವ ಕುತೂಹಲದಲ್ಲಿ ಪುತ್ತೂರಿನ ಜನರಿದ್ದಾರೆ.

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!