ಮರದಿಂದ ಬಿದ್ದು ಕೃಷಿಕ ಸಾವು

ಸುಳ್ಯ: ಮರದಿಂದ ಬಿದ್ದು ಕೃಷಿಕ ಸಾವನ್ನಪ್ಪಿದ ಘಟನೆ ಸೆ.2 ರಂದು ಸುಳ್ಯದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಪೈಚಾರ್ ನಿವಾಸಿ ಆರ್ತಾಜೆ ಉಮೇಶ್ ಗೌಡ(50) ಎಂದು ಗುರುತಿಸಲಾಗಿದೆ.ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಮರದಿಂದ ಬಿದ್ದು ಗಾಯಗೊಂಡಿದ್ದರು ತಕ್ಷಣವೇ ಇವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

News Editor

Learn More →

Leave a Reply

Your email address will not be published. Required fields are marked *