ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತ

ಕಾಪು : ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತವಾಗಿದ್ದು ಖ್ಯಾತ ಡಿಜೆ ಮರ್ವಿನ್ ಸಾವನ್ನಪ್ಪಿದ್ದು ಮತ್ತಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಕಾಪು ತಾಲೂಕಿನ ಮೂಳೂರು ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಗಾಯಗೊಂಡವರನ್ನುಪ್ರಜ್ವಲ್ ಮತ್ತು ಪ್ರಸಾದ್ ಎಂದು ಗುರುತಿಸಲಾಗಿದೆ.ಗಾಯಾಳುಗಳನ್ನು ಉಚ್ಚಿಲ ಆ್ಯಂಬುಲೆನ್ಸ್ ನ ಜಲಾಲುದ್ದೀನ್, ಹಮೀದ್, ಕೆ ಎಂ ಸಿರಾಜ್ ಮತ್ತು ಅನ್ವರ್ ಕೋಟೇಶ್ವರ ಉಡುಪಿಯ ಆಸ್ಪತ್ರೆಗೆ ಸಾಗಿಸಿದರು.

ಉಡುಪಿ, ಮಂಗಳೂರಿನ ಪ್ರಸಿದ್ದ ಡಿಜೆಯಾಗಿದ್ದ ಮರ್ವಿನ್ ಮೆಂಡೋನ್ಸಾ, ಹಲವಾರು ಕೊಂಕಣಿ ಮ್ಯೂಸಿಕ್ ವಿಡಿಯೋಗಳನ್ನು ಕೂಡಾ ನಿರ್ದೇಶನ ಮಾಡಿದ್ದರು. ನಿನ್ನೆಯಷ್ಟೇ ಅವರ ಹೊಸ ಕೊಂಕಣಿ ಮ್ಯೂಸಿಕ್ ವಿಡಿಯೋ ಬಿಡುಗಡೆ ಆಗಿತ್ತು.

News Editor

Learn More →

Leave a Reply

Your email address will not be published. Required fields are marked *