
ಪಶ್ಚಿಮ ಘಟ್ಟದ ತಪ್ಪಲಿನ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳ ಕೆಲ ಗ್ರಾಮಗಳಲ್ಲಿ ಮತ್ತೆ ಆನೆ ಹಾವಳಿ ಹೆಚ್ಚಾಗಿದ್ದು ರೈತರು ಮತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಒಂಟಿ ಸಲಗ ತನ್ನ ಪಥ ಸಂಚಲನ ಬದಲಾಯಿಸಿ. ಈ ಭಾಗದ ಜನವಸತಿ
ಪ್ರದೇಶದತ್ತ ಹೆಜ್ಜೆ ಹಾಕುತ್ತಿರುವುದು
ಆತಂಕದ ಸಂಗತಿಯಾಗಿದೆ. ಹೆಬ್ರಿ ತಾಲೂಕಿನ
ನಾಡ್ಡಾಲಿನ ಬೇಳಾರ, ನೆಲ್ಲಿಕಟ್ಟೆ ವರಂಗದ
ಅಡ್ಕ, ಕಬ್ಬಿನಾಲೆಯ ಬುಕ್ರಬೆಟ್ಟು, ಮುನಿ
ಯಾಲಿನ ಮುಟ್ಟಪಾಡಿ ಶಿರ್ಲಾಲು,
ಅಂಡಾರು ಭಾಗಗಳಲ್ಲಿ ಆನೆ ಸಂಚಾರದ
ಕುರುಹು ಲಭಿಸಿದ್ದು, ಬೆಳಾರಿನಲ್ಲಿ ರಕ್ಷಿತಾ
ರಣ್ಯ ವ್ಯಾಪ್ತಿಯ ಒಳಗಿನ ಕೃಷಿಕರೊಬ್ಬರ ಬಾಳೆತೋಟ ಹಾನಿಯಾದ ವರದಿಯಾಗಿದೆ.
ಕಳೆದ ತಿಂಗಳಿನಲ್ಲಿ ಆನೆಯೊಂದು ತನ್ನ ಪಥ ಬದಲಿಸಿ ಹಾರಾಡಿ ಗೇಮ್ ರೋಡ್ ಮಾರ್ಗವಾಗಿ ಶಿರ್ಲಾಲಿಗೆ ಆಗಮಿಸಿರುವು ದಾಗಿ ವರದಿಯಾಗಿದ್ದು ಬಳಿಕ ವಾಲಿಕುಂಜ ಗುಡ್ಡದಲ್ಲಿ ಒಂಟಿಯಾಗಿ ಸಂಚರಿಸಿ ಅಂಡಾರು ಮಾರ್ಗವಾಗಿ ಮುಟ್ಟಪಾಡಿ, ಕಬ್ಬಿನಾಲೆ ಮೂಲಕ ನಾಡ್ಡಾಲಿನ ನೆಲ್ಲಿಕಟ್ಟೆ ಬೆಳಾರು ಪರಿಸರದಲ್ಲಿ ಸಂಚರಿಸುತ್ತಿರುವ ಕುರಿತು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ. ಆನೆ ಸಂಚಾರ ಮಾಮೂಲು: ಕಳೆದ ವರ್ಷದಿಂದೀಚೆಗೆ ಈ ಭಾಗಗಳಲ್ಲಿ ಒಂಟಿ ಆನೆ ಆಗಾಗ್ಗೆ ಸಂಚರಿಸುತ್ತಿದ್ದು ಮಾಮೂಲಿ ಎಂಬಂತಾಗಿದೆ. ಆದರೆ ಹಗಲು ಹೊತ್ತಿನಲ್ಲಿ ಜನಸಾಮಾನ್ಯರಿಗೆ ಆನೆ ಇಲ್ಲಿ ಕಾಣಸಿಗುತ್ತಿಲ್ಲ. ಆದರೆ ರಾತ್ರಿ ವೇಳೆ ಅಲ್ಲಲ್ಲಿ ಬಾಳೆ ತೋಟ, ಅಡಿಕೆ ಸಸಿಗಳನ್ನು ಹಾನಿಗೊಳಿಸಿದ ಕುರುಹು ಸಿಕ್ಕಿದೆ. ರಸ್ತೆಯಲ್ಲಿ ಹೆಜ್ಜೆ ಗುರುತುಗಳು, ರಸ್ತೆ ಒಳಭಾಗದ ಜಾಗದಲ್ಲಿ ಆನೆ ಲದ್ದಿ ಕಾಣ ಸಿಕ್ಕಿದೆ. ರಕ್ಷಿತಾರಣ್ಯ ಪ್ರದೇಶದಲ್ಲಿ ಪಟ್ಟಾ ಜಾಗ ದಲ್ಲಿ ಕೃಷಿ ಮಾಡುತ್ತಿರುವ ರೈತರ ರಕ್ಷಣೆಗೆ ಮುಂದಾಗಬೇಕು ಎನ್ನುತ್ತಾರೆ ನಾಡ್ತಾಲು ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ, ಸೋಮೇಶ್ವರ ವನ್ಯಜೀವಿ ವಲಯ
ವ್ಯಾಪ್ತಿಯ ರಕ್ಷಿತಾರಣ್ಯದಲ್ಲಿ ಕಳೆದ ವರ್ಷ
ದಂತೆ ಈ ಬಾರಿಯೂ ಎರಡು ವಾರಗಳಿಂದ
ಒಂಟಿ ಸಲಗ ಓಡಾಡುತ್ತಿದ್ದು ರಕ್ಷಿತಾರಣ್ಯ
ಪರಿಸರದ ಪಟ್ಟಾಜಾಗದಲ್ಲಿರುವ ರೈತರಿಗೆ,
ಗ್ರಾಮಸ್ಥರಿಗೆ ಇಲಾಖೆ ಈಗಾಗಲೇ ಸೂಕ್ತ ಮಾಹಿತಿ ನೀಡಿ ಎಚ್ಚರಿಸಿದೆ. ಆನೆ ಸಂಚಾರ ನಡೆಸಿದ ನಾಕ್ಸಾಲಿನ ಬೆಳಾರ್, ಕಬ್ಬಿನಾಲೆ, ಹಳೆ ಸೋಮೇಶ್ವರ, ಅಂಡಾರು ಪ್ರದೇಶದಲ್ಲಿ ಕೃಷಿ ಹಾನಿಯಾಗಿದ್ದರೆ ದಾಖಲೆ ಒದಗಿಸಿದ್ದಲ್ಲಿ ಅದಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡಲಾಗುವುದು. ಕೇವಲ ರಾತ್ರಿ ಹೊತ್ತಿನಲ್ಲಿ ಆನೆ ಆಹಾರಕ್ಕಾಗಿ ಇಲ್ಲಿ ಅಲೆದಾಡುತ್ತಿದ್ದು, ಗ್ರಾಮಸ್ಥರು ಹೆಚ್ಚಿನ ಆತಂಕ ಪಡಬೇಕಾಗಿಲ್ಲ. ಇಲಾಖೆ ಸಿಬ್ಬಂದಿ ಬೀಡುಬಿಟ್ಟಿದ್ದು ಹೆಚ್ಚಿನ ನಿಗಾ ವಹಿಸಿದ್ದಾರೆ ಎಂದು ಸೋಮೇಶ್ವರ ವನ್ಯಜೀವಿ ವಲಯ, ಹೆಬ್ರಿ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಹೇಳಿದರು.
ಸೀತಾನದಿ: ಮುಂದುವರಿದ ಆನೆ ಕಾಟ ಕುಂದಾಪುರ: ಹೆಬ್ರಿ ತಾಲೂಕಿನ ನಾಡಾಲು ಗ್ರಾಮದ ನೆಲ್ಲಿಕಟ್ಟಿ ಕೋಟೆಬೆಟ್ಟು ಕೃಷ್ಣ ಪೂಜಾರಿ ಅವರ ತೋಟಕ್ಕೆ ಮಂಗಳವಾರ ರಾತ್ರಿ ಮುಗ್ಗಿದ ಆನೆ ದಾಂಧಲೆ ನಡೆಸಿದ್ದು ಬಾಳೆ ಸಹಿತ ಇತರೆ ಕೃಷಿ ಹಾನಿಗೊಂಡಿದೆ, ಸತತ 3 ದಿನಗಳಿಂದ ಸೀತಾನದಿ ಪರಿಸರದಲ್ಲಿ ಒಂಟಿ ಸಲಗದ ಹಾವಳಿ: `ಇಲಾಖೆಗೆ ಆಗ್ರಹಪಡಿಸಿದ್ದಾರೆ. ಹಗಲಿನಲ್ಲಿ ಕಾಡೊಳಗೆ ವಿಶ್ರಾಂತಿ ಪಡೆಯುವ ಒಂಟಿ ಸಲಗ ಮುಂದುವರಿದಿದೆ. ಸ್ಥಳೀಯರು ಕಳವಳಗೊಂಡಿದ್ದು ಸೂಕ್ತ ರಕ್ಷಣೆಗಾಗಿ ಸಂಬಂಧಿಸಿದ ಕತ್ತಲಾಗುತ್ತಿರುವಂತೆ ಕೃಷಿ ತೋಟಕ್ಕೆ ನುಗ್ಗುತ್ತಿರುವುದರಿಂದ ಭಯಭೀತರಾಗಿದ್ದಾರೆ,


